HomeIndiaವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ವಾಜಪೇಯಿ ಜನರಲ್ ಸ್ಕಾಲರ್ ಶಿಪ್ ನೋಂದಣಿ ಪ್ರಾರಂಭ

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ವಾಜಪೇಯಿ ಜನರಲ್ ಸ್ಕಾಲರ್ ಶಿಪ್ ನೋಂದಣಿ ಪ್ರಾರಂಭ

ನವದೆಹಲಿ: ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್(ICCR) ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಟಲ್ ಬಿಹಾರಿ ವೈಪೇಯಿ ಜನರಲ್ ಸ್ಕಾಲರ್‌ಶಿಪ್ ಯೋಜನೆಗಾಗಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ a2ascholarships.iccr.gov.in ನಲ್ಲಿ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ನೋಂದಣಿ ಪ್ರಕ್ರಿಯೆಯು ಫೆಬ್ರವರಿ 20 ರ ಇಂದಿನಿಂದ ಪ್ರಾರಂಭವಾಗಿದ್ದು, ಏಪ್ರಿಲ್ 30 ರೊಳಗೆ ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಅಧಿಕೃತ ಅಧಿಸೂಚನೆಯ ಪ್ರಕಾರ, ICCR A2R ಪೋರ್ಟಲ್ ಈಗ ಅಭ್ಯರ್ಥಿಗಳಿಗೆ ಮುಕ್ತವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೇ 31ರವರೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಹಿತಿ ನೀಡಲು ವಿವಿಗಳಿಗೆ ಸಮಯವಿರುತ್ತದೆ. ವೆಬ್‌ಸೈಟ್ ಪ್ರಕಾರ, ವಿದೇಶದಲ್ಲಿ ಭಾರತೀಯ ಮಿಷನ್‌ನಿಂದ ವಿದ್ಯಾರ್ಥಿವೇತನವನ್ನು ನಿಯೋಜಿಸಲು ಮತ್ತು ಆಫರ್ ಲೆಟರ್‌ಗಳನ್ನು ರಚಿಸಲು ಕೊನೆಯ ದಿನಾಂಕ ಜೂನ್ 30. ಅಭ್ಯರ್ಥಿಗಳು ಜುಲೈ 15 ರೊಳಗೆ ಆಫರ್ ಲೆಟರ್ ಅನ್ನು ಸ್ವೀಕರಿಸಬಹುದು.

ಮೊದಲ ಸುತ್ತಿನ ನಂತರ ಸೀಟುಗಳು ಲಭ್ಯವಿದ್ದರೆ, ಇತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲು ಭಾರತೀಯ ಮಿಷನ್‌ಗಳಿಗೆ ಕೊನೆಯ ದಿನಾಂಕ ಜುಲೈ 22 ಮತ್ತು ಅದು ಜುಲೈ 30 ರಂದು ಮುಕ್ತಾಯಗೊಳ್ಳುತ್ತದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular