HomeLatest Newsಚಕ್ಕುಬಂದಿ ಅಕ್ರಮವಾಗಿ ತಿದ್ದುಪಡಿ ಮಾಡಿದ ಇಬ್ಬರು ನೌಕರರು ಅಮಾನತು

ಚಕ್ಕುಬಂದಿ ಅಕ್ರಮವಾಗಿ ತಿದ್ದುಪಡಿ ಮಾಡಿದ ಇಬ್ಬರು ನೌಕರರು ಅಮಾನತು

ಚಿಕ್ಕಮಗಳೂರು: ಚಕ್ಕುಬಂದಿ ತಿದ್ದುಪಡಿ ಮಾಡಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಚಿಕ್ಕಮಗಳೂರು ಜಿಲ್ಲೆ ಕಡೂರು ಪುರಸಭೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಸಿ.ಎಸ್.ಶಂಕರ್, ಜಗದೀಶ್ ರಾಜ್ ಅರಸ್ ಅಮಾನತುಗೊಂಡ ನೌಕರರಾಗಿದ್ದಾರೆ. ವಾರ್ಡ್ ನಂಬರ್ 7ರಲ್ಲಿನ ಸ್ವತ್ತಿಗೆ ಸಂಬಂಧಿಸಿದ ಚಕ್ಕುಬಂದಿಯನ್ನು ಅಕ್ರಮವಾಗಿ ತಿದ್ದುಪಡಿ ಮಾಡಿದ ಆರೋಪ ಇವರ ಮೇಲಿದೆ. ಕ್ರಯಪತ್ರ ಅವಲೋಕನ ಮಾಡದೆ, ಸ್ಥಳ ಪರಿಶೀಲನೆ ನಡೆಸಿ ಮಹಜರು ನಡಾವಳಿಯನ್ನು ನಮೂದಿಸದೆ ಅರ್ಜಿದಾರರು ತೋರಿಸಿದ ಆಸ್ತಿ ಜಾಗದ ಚಕ್ಕುಬಂದಿ ನಮೂದಿಸಿ ಪರಿಷ್ಕರಣೆಗೆ ಶಿಫಾರಸು ಮಾಡಿದ್ದಾರೆ.

ಅಕ್ಕಪಕ್ಕದವರಿಗೆ ಈ ಬಗ್ಗೆ ತಿಳಿವಳಿಕೆ ನೀಡಿಲ್ಲ. ಕಂದಾಯ ಅಧಿಕಾರಿಯ ಆದೇಶಕ್ಕೆ ಕಡತವನ್ನು ಮಂಡಿಸದೆ ನೇರವಾಗಿ ವಿಷಯ ನಿರ್ವಾಹಕರಿಗೆ ಕಳುಹಿಸಲಾಗಿದೆ. ಅರ್ಜಿ ಸ್ವೀಕರಿಸಿದ ದಿನವೇ ವಿಷಯ ನಿರ್ವಾಹಕರಿಂದ ಕಡತ ಪಡೆದು ಅದೇ ದಿನ ವರದಿ ಸಲ್ಲಿಸಲಾಗಿದೆ. ಅದೇ ದಿನ ಇ-ಖಾತಾ ತಂತ್ರಾಂಶದಲ್ಲಿ ಪರಿಷ್ಕರಣೆಗೆ ಅವಕಾಶ ಮಾಡಿಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಅಮಾನತು ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular