ಹಾಸನ: ಅಕ್ರಮ ಸಂಬಂಧದ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಚಾಕುವಿನಿಂದ ಇರಿದು ಅಡುಗೆ ಗುತ್ತಿಗೆದಾರನ ಹತ್ಯೆ ಮಾಡಲಾಗಿದೆ.
ಹಾಸನ ನಗರದ ಕೆಆರ್ ಪುರಂ ಬಡಾವಣೆಯಲ್ಲಿ ತಡರಾತ್ರಿ ಘಟನೆ ನಡೆದಿದೆ. ಅಡುಗೆ ಗುತ್ತಿಗೆದಾರ ಆನಂದ್(48) ಕೊಲೆಯಾದವರು ಎಂದು ಹೇಳಲಾಗಿದೆ.. ಐದಾರು ಬಾರಿ ಚಾಕುವಿನಿಂದ ಇರಿದು ಧರ್ಮೇಂದ್ರ ಎಂಬಾತ ಕೊಲೆ ಮಾಡಿದ ಆರೋಪ ಕೇಳಿಬಂದಿದೆ.
ಮಹಿಳೆ ಜೊತೆಗೆ ಆನಂದ್ ಮತ್ತು ಧರ್ಮೇಂದ್ರ ಅನೈತಿಕ ಸಂಬಂಧ ಹೊಂದಿದ್ದರು. ಮಹಿಳೆ ಜೊತೆಗೆ ಧರ್ಮೇಂದ್ರ 8 ವರ್ಷದ ಗೆಳೆತನ ಹೊಂದಿದ್ದ. ಈ ನಡುವೆ ಇದೇ ಮಹಿಳೆಯೊಂದಿಗೆ ಆನಂದ್ ಸಂಬಂಧ ಬೆಳೆಸಿದ್ದ. ಈ ವಿಚಾರಕ್ಕೆ ನಿನ್ನೆ ರಾತ್ರಿ ಇಬ್ಬರ ನಡುವೆ ಗಲಾಟೆಯಾಗಿದೆ. ಗಲಾಟೆಯ ನಂತರ ಮನೆಗೆ ತೆರಳಿದ್ದ ಆನಂದ್ ನ್ನು ಮತ್ತೆ ಫೋನ್ ಮಾಡಿ ಕರೆಸಿಕೊಂಡಿದ್ದ ಧರ್ಮೇಂದ್ರ ಕುಡಿದ ಅಮಲಿನಲ್ಲಿ ಕೊಲೆಗೈದು ಪರಾರಿಯಾಗಿದ್ದಾನೆ. ಹಾಸನ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

