5 ಕಾಯಿಲೆಗಳನ್ನು ದೂರವಿಡುತ್ತೆ ಎರಡು ಕರಿಬೇವಿನ ಎಲೆ

ಕರಿಬೇವು ನಮ್ಮ ಆಹಾರದ ಸ್ವಾದ ಮತ್ತು ಘಮವನ್ನು ಹೆಚ್ಚಿಸುತ್ತದೆ. ಭಾರತದ ಪ್ರತಿ ಮನೆಯಲ್ಲೂ ಅಡುಗೆಗೆ ಕರಿಬೇವು ಬಳಸ್ತಾರೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳ ರುಚಿ ಕರಿಬೇವಿನಿಂದ ಮತ್ತಷ್ಟು ಹೆಚ್ಚುತ್ತದೆ. ಹಲವರು ಇದನ್ನು ಮಾರುಕಟ್ಟೆಯಿಂದ ಖರೀದಿಸಿದರೆ, ಇನ್ನೊಂದಷ್ಟು ಮಂದಿ ಅದನ್ನು ಮನೆಯಲ್ಲೇ ಕುಂಡಗಳಲ್ಲಿ ಬೆಳೆಸುತ್ತಾರೆ.

ಕರಿಬೇವಿನ ಸೊಪ್ಪಿನಲ್ಲಿ ರಂಜಕ, ಕ್ಯಾಲ್ಸಿಯಂ, ಕಬ್ಬಿಣ, ತಾಮ್ರ, ವಿಟಮಿನ್‌ಗಳು ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳಿವೆ. ಇದು ದೇಹಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಪ್ರತಿದಿನ ಬೆಳಿಗ್ಗೆ 3 ರಿಂದ 4 ಕರಿಬೇವಿನ ಎಲೆಗಳನ್ನು ತಿನ್ನಬೇಕು.

1. ಕಣ್ಣುಗಳಿಗೆ ಒಳ್ಳೆಯದು

ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ, ರಾತ್ರಿ ಕುರುಡುತನ ಅಥವಾ ಕಣ್ಣುಗಳಿಗೆ ಸಂಬಂಧಿಸಿದ ಇತರ ಅನೇಕ ಕಾಯಿಲೆಗಳ ಅಪಾಯವನ್ನು ತಪ್ಪಿಸಬಹುದು. ಇದರಲ್ಲಿ ವಿಟಮಿನ್ ಎ ಸೇರಿದಂತೆ ಅಗತ್ಯ ಪೋಷಕಾಂಶವು ಕಂಡುಬರುತ್ತದೆ. ಇದರಿಂದ ದೃಷ್ಟಿಶಕ್ತಿ ಹೆಚ್ಚುತ್ತದೆ.

2. ಮಧುಮೇಹ ನಿಯಂತ್ರಣ

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಹೈಪೊಗ್ಲಿಸಿಮಿಕ್ ಗುಣಲಕ್ಷಣಗಳನ್ನು ಹೊಂದಿರುವ ಕರಿಬೇವಿನ ಎಲೆಗಳು ಸಹಾಯ ಮಾಡುತ್ತವೆ. ಇದಕ್ಕಾಗಿ ಸಕ್ಕರೆ ಕಾಯಿಲೆ ಇರುವವರು ಪ್ರತಿದಿನ 2-3 ಕರಿಬೇವಿನ ಎಲೆಗಳನ್ನು ಅಗಿದು ತಿನ್ನಬೇಕು.

3. ಜೀರ್ಣಕ್ರಿಯೆ ಸುಧಾರಣೆ

ಕರಿಬೇವಿನ ಎಲೆಗಳನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಗಿಯಬೇಕು.  ಏಕೆಂದರೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆ, ಆಮ್ಲೀಯತೆ, ಹೊಟ್ಟೆ ಉಬ್ಬರಿಸುವಿಕೆ ಸೇರಿದಂತೆ ಎಲ್ಲಾ ಹೊಟ್ಟೆಯ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ.

4. ಸೋಂಕನ್ನು ತಡೆಗಟ್ಟುವುದು

ಆಂಟಿಫಂಗಲ್ ಮತ್ತು ಆ್ಯಂಟಿಬಯೋಟಿಕ್ ಗುಣಗಳು ಕರಿಬೇವಿನ ಎಲೆಗಳಲ್ಲಿ ಕಂಡುಬರುತ್ತವೆ, ಇದು ಅನೇಕ ರೀತಿಯ ಸೋಂಕುಗಳನ್ನು ತಡೆಯುತ್ತದೆ ಮತ್ತು ರೋಗಗಳ ಅಪಾಯವನ್ನು ತಪ್ಪಿಸುತ್ತದೆ.

5. ತೂಕ ಇಳಿಕೆ

ಕರಿಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಹೊಟ್ಟೆಯ ಕೊಬ್ಬನ್ನು ಸಹ ಇದು ಕರಗಿಸುತ್ತದೆ.  ಏಕೆಂದರೆ ಕರಿಬೇವಿನ ಎಲೆಗಳಲ್ಲಿ ಈಥೈಲ್ ಅಸಿಟೇಟ್, ಡೈಕ್ಲೋರೋಮೆಥೇನ್ ನಂತಹ ಪೋಷಕಾಂಶಗಳಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read