HomeEntertainmentʼದಿಲ್ ಸೆʼ ಚಿತ್ರದ ʼಜಿಯಾ ಜಲೇʼ ಭಾರತದ ಮೊದಲ ರಾಪ್ ಸಾಂಗ್; ಚರ್ಚೆಗೆ ಗ್ರಾಸವಾಯ್ತು ಪೋಸ್ಟ್

ʼದಿಲ್ ಸೆʼ ಚಿತ್ರದ ʼಜಿಯಾ ಜಲೇʼ ಭಾರತದ ಮೊದಲ ರಾಪ್ ಸಾಂಗ್; ಚರ್ಚೆಗೆ ಗ್ರಾಸವಾಯ್ತು ಪೋಸ್ಟ್

ಪ್ರೀತಿ ಜಿಂಟಾ ಮತ್ತು ಶಾರುಖ್ ಖಾನ್ ಅಭಿನಯದ ದಿಲ್ ಸೆ ಚಿತ್ರದ ಜಿಯಾ ಜಲೇ ಹಾಡು ಭಾರತದ ಮೊದಲ ರಾಪ್ ಹಾಡಾ ? ಹೀಗೆಂದು ಟ್ವಿಟರ್ ನಲ್ಲಿ ಪೋಸ್ಟ್ ಹಾಕಿದ್ದು ಇದಕ್ಕೆ ಹಲವರು ನೋ ಎಂದಿದ್ದಾರೆ.

1998 ರ ರೊಮ್ಯಾಂಟಿಕ್ ಮ್ಯೂಸಿಕಲ್ ಚಲನಚಿತ್ರ ‘ದಿಲ್ ಸೆ’ ನ ‘ಜಿಯಾ ಜಲೇ’ ಹಾಡು ಭಾರತದ ‘ಮೊದಲ ರಾಪ್ ಹಾಡು’ ಎಂದು ಟ್ವಿಟರ್ ಬಳಕೆದಾರ ‘ರಾಮೆನ್’ ಹೇಳಿಕೊಂಡಿದ್ದಾರೆ. “ಇದು ಭಾರತದ ಮೊದಲ ರಾಪ್ ಹಾಡು ಮತ್ತು ಅದರಲ್ಲಿ ಎಸ್‌ಆರ್‌ಕೆ ಇದ್ದರು” ಎಂದು ಶೀರ್ಷಿಕೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಲ್ಲಿ ಟ್ವಿಟರ್ ಬಳಕೆದಾರ ಮಲಯಾಳಂ ಭಾಷೆಯಲ್ಲಿ ಹೇಳುತ್ತಿರುವ ಸಾಲುಗಳನ್ನು ಉಲ್ಲೇಖಿಸುತ್ತಿದ್ದಾರೆ. ಇದು ವ್ಯಂಗ್ಯಾತ್ಮಕ ಟ್ವೀಟ್ ಆಗಿದ್ದರೂ, ಅನೇಕರು ಅದನ್ನು ಒಪ್ಪುತ್ತಿಲ್ಲ.

“ಕ್ಷಮಿಸಿ ಆದರೆ ಇದು ರಾಪ್ ಅಲ್ಲ” ಎಂದು ಟ್ವಿಟ್ಟರ್ ಬಳಕೆದಾರರು ಬರೆದಿದ್ದಾರೆ. ಇದಕ್ಕಿಂತ ಮೊದಲೇ ಭಾರತದ ಚಿತ್ರರಂಗದಲ್ಲಿ ಹಲವು ಹಾಡುಗಳು ರಾಪ್ ಸಾಂಗ್ ಸ್ಥಾನ ಪಡೆದಿವೆ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಚರ್ಚೆ ನಡೆಯುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular