HomeAstroಅರಿಶಿನದಲ್ಲಿದೆ ಈ ಧಾರ್ಮಿಕ ಮಹತ್ವ

ಅರಿಶಿನದಲ್ಲಿದೆ ಈ ಧಾರ್ಮಿಕ ಮಹತ್ವ

ಅರಿಶಿನ ಒಂದು ವಿಧದ ಔಷಧವಾಗಿದೆ. ಹಿಂದೂ ಧರ್ಮದಲ್ಲಿ ಅರಿಶಿನವನ್ನು ಮಂಗಳಕರವೆಂದು, ಶುಭವೆಂದು ಪರಿಗಣಿಸಲಾಗಿದೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವ ಜೊತೆಗೆ ಜೀವನವನ್ನು ಮಂಗಳಮಯಗೊಳಿಸುತ್ತದೆ. ಅರಿಶಿನ ವಿಷ ವಿರೋಧಕವಾಗಿದ್ದು, ನಕಾರಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ.

ಹಳದಿ, ಕಿತ್ತಳೆ ಹಾಗೂ ಕಪ್ಪು ಬಣ್ಣದಲ್ಲಿ ಈ ಅರಿಶಿನ ಸಿಗುತ್ತದೆ. ಹಳದಿ ಅರಿಶಿನ ಗುರು ಗ್ರಹ ಹಾಗೂ ಕಿತ್ತಳೆ ಮಂಗಳ ಮತ್ತು ಕಪ್ಪನ್ನು ಶನಿಗೆ ಹೋಲಿಸಲಾಗುತ್ತದೆ. ದಿನನಿತ್ಯದ ಜೀವನದಲ್ಲಿ ಅರಿಶಿನ ಬಳಕೆ ಬಹಳ ಮಹತ್ವದ್ದು.

ಆಹಾರದಲ್ಲಿ ಅರಿಶಿನ ಬಳಕೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಿಳೆಯರು ಜಲಕ್ಕೆ ಅರಿಶಿನ ಹಾಕಿ ಸೂರ್ಯನಿಗೆ ಅರ್ಪಣೆ ಮಾಡಿದ್ರೆ ಕೌಟುಂಬಿಕ ಸಮಸ್ಯೆ ದೂರವಾಗುತ್ತದೆ.

ಹೊಟ್ಟೆ ಹಾಗೂ ಕ್ಯಾನ್ಸರ್ ಸಮಸ್ಯೆಯಿಂದ ಬಳಲುವವರು ಅರಿಶಿನವನ್ನು ದಾನ ಮಾಡಬೇಕು.

ಪ್ರತಿದಿನ ಅರಿಶಿನದ ತಿಲಕವಿಡುವುದ್ರಿಂದ ಮಾತಿನಲ್ಲಿ ಶಕ್ತಿ ಹೆಚ್ಚಾಗುವ ಜೊತೆಗೆ ಸಾತ್ವಿಕ ಭಾವ ಬಲ ಪಡೆಯುತ್ತದೆ.

ಅರಿಶಿನ ಕೊಂಬಿನ ಮಾಲೆಯಿಂದ ಜಪ ಮಾಡಿದ್ರೆ ವ್ಯಕ್ತಿ ಬುದ್ಧಿವಂತ ಹಾಗೂ ಜ್ಞಾನವುಳ್ಳವನಾಗ್ತಾನೆ.

ನಕಾರಾತ್ಮಕ ಶಕ್ತಿ ದೂರ ಮಾಡುವ ಗುಣ ಅರಿಶಿನಕ್ಕಿದೆ. ಹಾಗಾಗಿಯೇ ಶುಭ ಕಾರ್ಯಗಳಲ್ಲಿ ಅರಿಶಿನ ಬಳಸುತ್ತಾರೆ.

ಅರಿಶಿನವನ್ನು ಮೈಗೆ ಹಚ್ಚಿ ಸ್ನಾನ ಮಾಡುವುದ್ರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular