HomeKarnatakaBREAKING NEWS: ಟಿಬಿ ಡ್ಯಾಂ ಬಳಿ ಗೇಟ್ ಅಳಿವಡಿಸುವಾಗ ಅವಘಡ: ಟ್ರಕ್ ನಿಂದ ಗೇಟ್ ಇಳಿಸುವಾಗ...

BREAKING NEWS: ಟಿಬಿ ಡ್ಯಾಂ ಬಳಿ ಗೇಟ್ ಅಳಿವಡಿಸುವಾಗ ಅವಘಡ: ಟ್ರಕ್ ನಿಂದ ಗೇಟ್ ಇಳಿಸುವಾಗ ತಪ್ಪಿದ ಬ್ಯಾಲೇನ್ಸ್

ಕೊಪ್ಪಳ: ತುಂಗಭದ್ರಾ ಡ್ಯಾಂನ 19ನೇ ಗೇಟ್ ಚೈನ್ ಲಿಂಕ್ ಕಟ್ ಆಗಿ ನೀರಿನಲ್ಲಿ ಕೊಚ್ಚಿ ಹೋಗಿರುವ ಹಿನ್ನೆಲೆಯಲ್ಲಿ ಗೇಟ್ ಅಳವಡಿಕೆ ಕಾರ್ಯ ಚುರುಕುಗೊಂಡಿದೆ.

ಕೊಪ್ಪಳ ಜಿಲ್ಲೆಯ ಮುನಿರಾಬಾದ್ ತುಂಗಭದ್ರಾ ಡ್ಯಾಂ ಬಳಿ ಗೇಟ್ ಅಳವಡಿಕೆ ನಡೆಸಲಾಗುತ್ತಿದೆ. ತಜ್ಞರು ಹಾಗೂ ಸಿಬ್ಬಂದಿಗಳು ಟ್ರಕ್ ಮೂಲಕವಾಗಿ ಟಿಬಿ ಡ್ಯಾಂ ಬಳಿ ಬೃಹತ್ ಗೇಟ್ ಸಾಗಿಸಿದ್ದಾರೆ. ಈ ವೇಳೆ ಟ್ರಕ್ ನಿಂದ ಗೇಟ್ ಇಳಿಸುವಾಗ ಅವಘಡ ಸಂಭವಿಸಿದೆ.

ಟ್ರಕ್ ನಿಂದ ಗೇಟ್ ಇಳಿಸುತ್ತಿದ್ದ ವೇಳೆ ಏಕಾಏಕಿ ಬ್ಯಾಲೆನ್ಸ್ ತಪ್ಪಿದೆ. ಗೇಟ್ ನ್ನು ಡ್ಯಾಂ ನ ಮೇಲ್ಭಾಗಕ್ಕೆ ಬೆಲ್ಟ್ ಕಟ್ಟಿ ಎತ್ತುವಾಗ ಒಮ್ಮೆಲೆ ಬ್ಯಾಲೆನ್ಸ್ ತಪ್ಪಿದೆ. ಬಳಿಕ ಸಿಬ್ಬಂದಿಗಳು ನಿಧಾನವಾಗಿ ಗೇಟ್ ಇಳಿಸಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಟಿಬಿ ಡ್ಯಾಂಗೆ ಗೇಟ್ ಅಳವಡಿಸುವುದೇ ಒಂದು ದೊಡ್ಡ ಚಾಲೇಂಜ್. ಇನ್ನು ಮೂರು ದಿನಗಳಲ್ಲಿ ಶುಭ ಸುದ್ದಿ ಕೊಡುತ್ತೇವೆ ಎಂದು ತಜ್ಞರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular