HomeKarnatakaBIG NEWS: ತುಂಗಾ ಡ್ಯಾಂ ಬಳಿ ಪ್ರೇಮಿಗಳ ಮೇಲೆ ನೈತಿಕ ಪೊಲೀಸ್ ಗಿರಿ; ಯುವಕರ ಗುಂಪಿನಿಂದ...

BIG NEWS: ತುಂಗಾ ಡ್ಯಾಂ ಬಳಿ ಪ್ರೇಮಿಗಳ ಮೇಲೆ ನೈತಿಕ ಪೊಲೀಸ್ ಗಿರಿ; ಯುವಕರ ಗುಂಪಿನಿಂದ ಹಲ್ಲೆ

ಶಿವಮೊಗ್ಗ: ಪ್ರೇಮಿಗಳ ಮೇಲೆ ಯುವಕರ ಗುಂಪು ನೈತಿಕ ಪೊಲೀಸ್ ಗಿರಿ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತುಂಗಾ ಜಲಾಶಾದ ಬಳಿ ನಡೆದಿದೆ.

ತುಂಗಾ ಜಲಾಶಯ ವೀಕ್ಷಣೆಗೆಂದು ಪ್ರೇಮಿಗಳು ಬಂದಿದ್ದರು. ಪ್ರೇಮಿಗಳ ಜೊತೆ ಪ್ರಿಯಕರನ ಸ್ನೇಹಿತ ಕೂಡ ಬಂದಿದ್ದ. ಈ ವೇಳೆ ಸ್ಥಳೀಯ ಯುವಕರ ಗುಂಪು ಅನುಚಿತವಾಗಿ ವರ್ತಿಸಿದ ಆರೋಪ ಕೇಳಿಬಂದಿದೆ. ಅಲ್ಲದೇ, ನಾಲ್ವರು ಯುವಕರು ಇಬ್ಬರು ಯುವಕ ಮೇಲೆ ಹಲ್ಲೆ ನಡೆಸಿದ್ದಾರೆ.

ಹಲ್ಲೆಗೊಳಗಾದ ಯುವತಿಯ ಪ್ರಿಯಕರ ಹಾಗೂ ಆತನ ಸ್ನೇಹಿತ ಇಬ್ಬರೂ ಸ್ಥಳದಿಂದ ಓಡಿ ಹೋಗಿದ್ದಾರೆ. ಯುವತಿಯನ್ನು ಸ್ಥಳೀಯ ಯುವಕರ ಗುಂಪು ಸ್ಥಳದಲ್ಲೇ ಇರಿಸಿಕೊಂಡಿದೆ. ಘಟನಾ ಸ್ಥಳದಿಂದ ಬಂದ ಯುವತಿಯ ಪ್ರಿಯಕರ ಹಾಗೂ ಸ್ನೇಹಿತ ಯುವತಿ ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಕ್ಷಣ ಪೊಲಿಸರು ದೌಡಾಯಿಸಿ ಯುವತಿ ಹಾಗೂ ಸ್ಥಳೀಯ ಯುವಕರನ್ನು ತುಂಗಾ ನಗರ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ನೈತಿಕ ಪೊಲೀಸ್ ಗಿರಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular