HomeKarnatakaತುಮಕೂರು ಮಹಿಳಾ ಪಿಎಸ್ಐ ನಾಪತ್ತೆ

ತುಮಕೂರು ಮಹಿಳಾ ಪಿಎಸ್ಐ ನಾಪತ್ತೆ

ತುಮಕೂರು: ತುಮಕೂರಿನ ಮಹಿಳಾ ಪಿಎಸ್ಐ ಓರ್ವರು ಏಕಾಏಕಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಪಿಎಸ್ಐ ಅವರ ಮಗಳು ಈ ಬಗ್ಗೆ ದೂರು ನೀಡಿದ್ದಾರೆ.

ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ ಮಂಗಳಮ್ಮ ನಾಪತ್ತೆಯಾದವರು. ತನ್ನ ತಾಯಿ ಕಾಣುತ್ತಿಲ್ಲ ಎಂದು ಮಂಗಳಮ್ಮ ಅವರ ಮಗಳು ಹೊಸ ಬಡಾವಣೆ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏಪ್ರಿಲ್ 3ರಂದು ಪಿಎಸ್ಐ ಮಂಗಳಮ್ಮ ಡಿವೈಎಸ್ ಪಿ ಕಚೇರಿಯಲ್ಲಿ ಸಭೆಗೆ ಹಾಜರಾಗಿದ್ದರು. ಈ ವೇಳೆ ಮಂಗಳಮ್ಮ ಅವರಿಗೆ ಮನೆಯಿಂದ ಕರೆ ಬಂದಿತ್ತು. ಬಳಿಕ ಅಲ್ಲಿಂದ ಠಾಣೆಗೆ ತೆರಳಿ ಸಮವಸ್ತ್ರ ಬದಲಿಸಿ ಸಿವಿಲ್ ಡ್ರೆಸ್ ನಲ್ಲಿ ಠಾಣೆಯಿಂದ ಹೊರ ಹೋದವರು ಅತ್ತ ಮನೆಗೂ ಹೋಗಿಲ್ಲ. ಇತ್ತ ಠಾಣೆಗೂ ಬಂದಿಲ್ಲ. ಮಂಗಳಮ್ಮ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಫೋನ್ ಕರೆಗೂ ಸಿಗುತ್ತಿಲ್ಲ. ಇದರಿಂದ ಕಂಗಾಲಾಗಿರುವ ಮಗಳು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಮಂಗಳಮ್ಮ ಅವರ ಮಗಳಿಗೆ ಇತ್ತೀಚೆಗೆ ಡಿವೋರ್ಸ್ ಆಗಿತ್ತು. ಕೆಲ ದಿನಗಳಿಂದ ತಾಯಿ-ಮಗಳು ಒಟ್ಟಿಗೆ ವಾಸವಾಗಿದ್ದರು. ಕೌಟುಂಬಿಕ ಕಲಹಕ್ಕೆ ಬೇಸತ್ತು ಮನೆ ಬಿಟ್ಟು ಹೋಗಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ. ಪಿಎಸ್ಐ ಮಂಗಳಮ್ಮ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular