HomeKarnatakaSHOCKING NEWS: ಸಿಡಿಮದ್ದಿನ ಉಂಡೆಯನ್ನು ಚಂಡೆಂದು ಆಟವಾಡಿದ ಮಕ್ಕಳು; ಪವಾಡದ ರೀತಿ ದುರಂತದಿಂದ ಸ್ವಲ್ಪದರಲ್ಲೇ ಪಾರಾದ...

SHOCKING NEWS: ಸಿಡಿಮದ್ದಿನ ಉಂಡೆಯನ್ನು ಚಂಡೆಂದು ಆಟವಾಡಿದ ಮಕ್ಕಳು; ಪವಾಡದ ರೀತಿ ದುರಂತದಿಂದ ಸ್ವಲ್ಪದರಲ್ಲೇ ಪಾರಾದ ವಿದ್ಯಾರ್ಥಿಗಳು

ತುಮಕೂರು: ಹಂದಿ ಬೇಟೆಗೆಂದು ಇಟ್ಟಿದ್ದ ಸಿಡಿಮದ್ದಿನ ಉಂಡೆಯನ್ನು ಮಕ್ಕಳು ಚಂಡೆಂದು ಆಟವಾಡಿದ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಮಾದೇನಹಳ್ಳಿಯಲ್ಲಿ ನಡೆದಿದೆ.

ಶಾಲೆಯ ಪಕ್ಕದಲ್ಲೇ ಸಿಡಿಮದ್ದಿನ ಉಂಡೆ ಎಸೆಯಲಾಗಿತ್ತು. ಇದನ್ನು ಕಂಡ ಮಕ್ಕಳು ಚಂಡೆಂದು ಎತ್ತಿಕೊಂಡು ಆಟವಾಡಿದ್ದಾರೆ. ಶಾಲೆ ಮುಗಿದ ಬಳಿಕ ಬಾಲಕ ಶ್ರೀನಿವಾಸ್ ಇದನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾನೆ. ಮನೆಗೆ ತಂದ ಉಂಡೆ ಯಾವುದೋ ಮಾಟ-ಮಂತ್ರದ ಉಂಡೆ ಇರಬಹುದು ಎಂದು ಭಾವಿಸಿ ಶ್ರೀನಿವಾಸ್ ತಂದೆ ಅದನ್ನು ದೂರಕ್ಕೆ ಎಸೆದಿದ್ದಾರೆ.

ಅಷ್ಟರಲ್ಲಿ ಬಂದ ನಾಯಿಯೊಂದು ಆ ಉಂಡೆಯನ್ನು ಕಚ್ಚಿದೆ. ಅಷ್ಟರಲ್ಲಿ ಸಿಡಿಮದ್ದಿನ ಉಂಡೆ ಸ್ಫೋಟಗೊಂಡಿದೆ. ಬೀದಿನಾಯಿಯ ಬಾಯಿ ಛಿದ್ರ ಛಿದ್ರಗೊಂಡು ಸ್ಥಳದಲ್ಲೇ ಸಾವನ್ನಪ್ಪಿದೆ. ಸಿಡಿಮದ್ದಿನ ಉಂಡೆಯನ್ನು ಚೆಂಡೆಂದು ಭಾವಿಸಿ ಆಟವಾಡಿ, ಮನೆಗೆ ತಂದಿದ್ದ ಬಾಲಕ ನಿಜಕ್ಕೂ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿಕ್ಕನಾಯಕನಹಳ್ಳಿನ್ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular