HomeLive Newsನವಜಾತ ಶಿಶು ಬಿಟ್ಟು ಮದುವೆ ಸಂಭ್ರಮದಲ್ಲಿ ಭಾಗಿ; ಅನಾರೋಗ್ಯದಿಂದ ಮಗು ಸಾವು: ತಂದೆ-ತಾಯಿ ಸೇರಿ ನಾಲ್ವರ...

ನವಜಾತ ಶಿಶು ಬಿಟ್ಟು ಮದುವೆ ಸಂಭ್ರಮದಲ್ಲಿ ಭಾಗಿ; ಅನಾರೋಗ್ಯದಿಂದ ಮಗು ಸಾವು: ತಂದೆ-ತಾಯಿ ಸೇರಿ ನಾಲ್ವರ ವಿರುದ್ಧ FIR ದಾಖಲು

ತುಮಕೂರು: ನವಜಾತ ಶಿಶುವನ್ನು ಬಿಟ್ಟು ತಂದೆ-ತಾಯಿಗಳು ಇನ್ನೋರ್ವ ಮಗಳ ಮದುವೆಯ ಸಂಭ್ರಮದಲ್ಲಿ ಭಾಗಿಯಾಗಿದ್ದು, ಅನಾರೋಗ್ಯಕ್ಕೀಡಾದ ನವಜಾತ ಶಿಶು ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ.

ಆರೋಗ್ಯ ಸಮಸ್ಯೆಯಿಂದಾಗಿ ನವಜಾತ ಶಿಶು ಸಂಬಂಧಿಕರ ಮನೆಯಲ್ಲಿ ಮೃತಪಟ್ಟಿದೆ. ಇದೀಗ ಮಗುವಿನ ತಂದೆ-ತಾಯಿ ಸೇರಿದಂತೆ ನಲವರ ವಿರುದ್ಧ ತುಮಕೂರು ಮಹಿಳಾ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಜನವರಿ 28ರಂದು ತುಮಕೂರು ನಗರದ ದಂಪತಿಗೆ ಮಗು ಜನಿಸಿತ್ತು. ಮೊದಲ ಮಗಳ ಮದುವೆ ತಯಾರಿ ನಡುವೆಯೇ ಮಗು ಹುಟ್ಟಿದೆ. ಮಗು ಹುಟ್ಟಿದ ಮರುದಿನವೇ ದಂಪತಿಯ ಮೊದಲ ಮಗಳಿಗೆ ನಿಶ್ಚಿತಾರ್ಥವಿತ್ತು. ಹಾಗಾಗಿ ತಾಯಿ, ನವಜಾತಶಿಶುವನ್ನು ತನ್ನ ಸಹೋದರಿ ಮನೆಯಲ್ಲಿ ಬಿಟ್ಟಿದ್ದಳು. ಬಳಿಕ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದರು. ಚಿಕ್ಕಮನ ಜೊತೆ ಇದ್ದ ನವಜಾತ ಶಿಶುವಿನ ಆರೋಗ್ಯದಲ್ಲಿ ಏರುಪೇರಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತೀವ್ರ ಅನಾರೋಗ್ಯದಿಂದ ಮಗು ಸಾವನ್ನಪ್ಪಿದೆ. ಹುಟ್ಟಿದ ಒಂದೇ ದಿನಕ್ಕೆ ತಂದೆ-ತಾಯಿ ಮಗುವನ್ನು ಬೇರೆಯವರ ಮನೆಯಲ್ಲಿ ಬಿಟ್ಟು ಮದುವೆ ಸಂಭ್ರಮದಲ್ಲಿ ಮುಳುಗಿದ್ದಾರೆ. ಪೋಷಕರ ಬೇಜವಾಬ್ದಾರ್, ನಿರ್ಲಕ್ಷ್ಯಕ್ಕೆ ನವಜಾತ ಶಿಶು ಕೊನೆಯುಸಿರೆಳೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular