HomeKarnatakaBIG NEWS: ಸಾಲಕ್ಕಿಂತ ಹೆಚ್ಚು ಬಡ್ಡಿ ಮೊತ್ತ ನೋಡಿ ಶಾಕ್: ಹೃದಯಾಘಾತದಿಂದ ವ್ಯಕ್ತಿ ಸಾವು

BIG NEWS: ಸಾಲಕ್ಕಿಂತ ಹೆಚ್ಚು ಬಡ್ಡಿ ಮೊತ್ತ ನೋಡಿ ಶಾಕ್: ಹೃದಯಾಘಾತದಿಂದ ವ್ಯಕ್ತಿ ಸಾವು

ತುಮಕೂರು: ಮೈಕ್ರೋ ಫೈನಾನ್ಸ್ ನಿಂದ ಪಡೆದಿದ್ದ ಸಾಲಕ್ಕಿಂತ ಬಡ್ಡಿಯನ್ನೇ ಕಟ್ಟಿ ಕಟ್ಟಿ ಆಘಾತಕ್ಕೀಡಾಗಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಸೈಯದ್ ಸಮೀವುಲ್ಲಾ ಮೃತ ವ್ಯಕ್ತಿ. ತುಮಕೂರು ನಗರದ ಲೇಬರ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಫೈವ್ ಸ್ಟಾರ್ ಫೈನಾನ್ಸ್ ನಿಂದ 2019ರಲ್ಲಿ 4.66 ಲಕ್ಷ ಮನೆ ಸಾಲ ಪಡೆದಿದ್ದರು. 2024ರವರೆಗೆ ಬರೋಬ್ಬರಿ 7.20 ಲಕ್ಷ ಬಡ್ಡಿ ಕಟ್ಟಿದ್ದರು. ಆದರೆ ಅಸಲು ಹಾಗೆಯೇ ಇಉಳಿದಿತ್ತು. ಅಸಲು ಕಟ್ಟುವಂತೆ ಫೈನಾನ್ಸ್ ನವರು ಹೇಳುತ್ತಲೇ ಇದ್ದರು.

ಪಡೆದಿದ್ದ ಸಾಲಕ್ಕೆ 24.55% ನಂತೆ ಮನಸ್ಸಿಗೆ ಬಂದಂತೆ ಬಡ್ಡಿಯನ್ನು ಹಾಕಲಾಗಿತ್ತಂತೆ. ಸಾಲ ಪಡೆದಿದ್ದಕ್ಕಿಂತ ಬಡ್ಡಿಯನ್ನೇ ಕಟ್ಟಿ ನೊಂದಿದ್ದ ಸಮೀವುಲ್ಲಾ ಇದೀಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular