HomeLatest Newsತುಳಸಿ ಗಿಡಕ್ಕೆ ಪೂಜೆ ಮಾಡುವಾಗ ಈ ಒಂದು ತಪ್ಪು ಮಾಡಬೇಡಿ ಲಕ್ಷ್ಮಿ ಕೃಪೆಯಿಂದ ಹಣ ಉಳಿಯಲು...

ತುಳಸಿ ಗಿಡಕ್ಕೆ ಪೂಜೆ ಮಾಡುವಾಗ ಈ ಒಂದು ತಪ್ಪು ಮಾಡಬೇಡಿ ಲಕ್ಷ್ಮಿ ಕೃಪೆಯಿಂದ ಹಣ ಉಳಿಯಲು ಹೀಗೆ ಮಾಡಿ

ಹಿಂದೂ ಧರ್ಮದಲ್ಲಿ ತುಳಸಿಯನ್ನು ಕೇವಲ ಗಿಡವಾಗಿ ನೋಡದೆ, ಮನೆಯನ್ನು ಕಾಯುವ ಮಹಾಲಕ್ಷ್ಮಿಯ ರೂಪವಾಗಿ ಪೂಜಿಸಲಾಗುತ್ತದೆ. ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ತುಳಸಿಗಿಂತ ಶ್ರೇಷ್ಠವಾದ ಸಸ್ಯ ಮತ್ತೊಂದಿಲ್ಲ.ತುಳಸಿ ಗಿಡವು ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯೊಂದಿಗೆ ನೇರ ಸಂಬಂಧವನ್ನು ಹೊಂದಿದೆ. ತುಳಸಿ ಇರುವಲ್ಲಿ ಸಾಕ್ಷಾತ್ ನಾರಾಯಣನು ನೆಲೆಸಿರುತ್ತಾನೆ ಎಂಬ ನಂಬಿಕೆಯಿದೆ.ದೈವಿಕ ಕೃಪೆಯ ಜೊತೆಗೆ, ತುಳಸಿಯು ಮನೆಯ ವಾತಾವರಣವನ್ನು ಶುದ್ಧೀಕರಿಸಿ ಮನೆಯ ಸದಸ್ಯರಿಗೆ ಉತ್ತಮ ಆರೋಗ್ಯವನ್ನು ಕರುಣಿಸುತ್ತದೆ.

ಎಷ್ಟೇ ಹಣ ಸಂಪಾದನೆ ಮಾಡಿದ್ರೂ ಕೆಲವೊಮ್ಮೆ ಒಂದು ರೂಪಾಯಿ ಕೂಡ ಉಳಿತಾಯ ಅಗಿರಲ್ಲ. ಹಣ ಬರುವ ವೇಳೆಗೆ ಹತ್ತಾರು ಸಮಸ್ಯೆಗಳು ಎದುರಾಗಿರುತ್ತವೆ. ಹಣ ಕೈಯಲ್ಲಿ ಉಳಿಯದೇ ಇರುವುದಕ್ಕೆ ಕಾರಣ ಜಾತಕದಲ್ಲಿನ 12 ನೇ ಮನೆಯ ಕಾರಣವಾಗಿರುತ್ತದೆ ಎನ್ನುತ್ತದೆ ಜೋತಿಷ್ಯ ವಾಸ್ತು ಶಾಸ್ತ್ರ.

ಒಬ್ಬ ವ್ಯಕ್ತಿಯ ಗ್ರಹಗಳ ಪರಿಸ್ಥಿತಿಯು ಹಿಂದಿನ ಜನ್ಮದಲ್ಲಿ ಆತ್ಮಗಳು ಮಾಡಿರುವ ಕರ್ಮದ ಮುಖೇನ ಈ ಜನ್ಮದಲ್ಲಿ ಅನುಭವಿಸಿರುತ್ತಾರೆ. ಹಣ ನಿಲ್ಲದೇ ಇರಲು ಹಿಂದಿನ ಜನ್ಮದಲ್ಲಿ ಸಂಬಳ ಕೊಡುವ ಮೇಲಾಧಿಕಾರಿಗಳಿಗೆ ನಿಷ್ಠೆ ಇಲ್ಲದೇ ಇರುವ ಕಾರಣ ಈ ಜನ್ಮದಲ್ಲಿ ಅದು ಅನುಭವಿಸಿರುತ್ತಾರೆ. ಇಲ್ಲವೇ ಹಿಂದಿನ ಜನ್ಮದಲ್ಲಿ ತಂದೆ ತಾಯಿ ಬಳಿ ಹಣ ಕದ್ದಿರುವುದು, ಇಲ್ಲವೇ ಹಣಕ್ಕಾಗಿ ಸುಳ್ಳು ಹೇಳಿರುವುದು, ಸ್ನೇಹಿತರಿಗೆ ಹಣ ಮೋಸ ಮಾಡಿದ್ದ ಪಕ್ಷದಲ್ಲಿ ಅದು ಈ ಜನ್ಮದಲ್ಲಿ ಸಮಸ್ಯೆ ಎದುರಿಸಿರುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ರೀತಿಯ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜ್ಯೋತಿಷ್ಯ ವಾಸ್ತು ಶಾಸ್ತ್ರದಲ್ಲಿ ಅವಕಾಶವಿದೆ. ಇದಕ್ಕೆ ನಿತ್ಯ ಲಕ್ಷ್ಮೀ ಅಥವಾ ವಾಸ್ತು ಲಕ್ಷ್ಮೀಯ ಕಾರಣ ಕರ್ತರಾಗಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಮತ್ತು ಶನಿ ಗ್ರಹಗಳು ಈ ರೀತಿಯ ದೋಷಗಳಿಗೆ ಕಾರಣಕರ್ತರಾಗಿರುತ್ತಾರೆ. ಇದಕ್ಕೆ ಪರಿಹಾರವಾಗಿ ಮನೆಯಲ್ಲಿ ಈ ಕೆಳಗಿನಂತೆ ಪೂಜೆ ಮಾಡಿದ್ರೆ ಪರಿಹಾರ ಸಿಗುತ್ತದೆ.

ಮನೆಯಲ್ಲಿ ತುಳಸಿ ಗಿಡ ( ಲಿವಿಂಗ್ ಗಾಡೆಸ್ ) ವನ್ನು ದೇವ ಮೂಲೆಯಲ್ಲಿ (ಈಶಾನ್ಯ ಭಾಗದಲ್ಲಿ) ಇಡಬೇಕು.

ಪ್ರತಿ ದಿನ ಅದಕ್ಕೆ ನೀರು ಹಾಕಿ ಪೂಜೆ ಮಾಡಬೇಕು.

ಪ್ರತಿ ದಿನ ತುಳಸಿ ಗಿಡಕ್ಕೆ ನೈವೇದ್ಯ ಕೊಡಬೇಕು.

ಭಕ್ತಿಯಿಂದ ದೀಪ ಹಚ್ಚಿ, ಅಕ್ಷತೆ, ಕುಂಕುಮ, ಅರಶಿನ, ಉಪ್ಪು ಹಾಕಿ ಪೂಜೆ ಮಾಡಬೇಕು.

ಪೂಜೆ ಮಾಡುವಾಗ ಈ ಮಂತ್ರವನ್ನು 108 ಸಲ ಪೂಜಾ ಕಾಲದಲ್ಲಿ ಹೇಳಬೇಕು.

ತುಳಸಿ ಸಸ್ಯದ ಪಾವಿತ್ರ್ಯತೆ ಮತ್ತು ನಂಬಿಕೆಗಳು:

ತುಳಸಿ ಗಿಡವು ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯೊಂದಿಗೆ ನೇರ ಸಂಬಂಧವನ್ನು ಹೊಂದಿದೆ. ತುಳಸಿ ಇರುವಲ್ಲಿ ಸಾಕ್ಷಾತ್ ನಾರಾಯಣನು ನೆಲೆಸಿರುತ್ತಾನೆ ಎಂಬ ನಂಬಿಕೆಯಿದೆ.

ಯಾವ ಮನೆಯಲ್ಲಿ ಹಸಿರಾದ ತುಳಸಿ ಗಿಡವಿರುವುದಿಲ್ಲವೋ, ಅಲ್ಲಿ ಲಕ್ಷ್ಮಿ ದೇವಿಯು ನೆಲೆಸುವುದಿಲ್ಲ ಎಂಬುದು ಪುರಾಣಗಳ ಉಲ್ಲೇಖ. ಆದ್ದರಿಂದಲೇ ಪ್ರತಿಯೊಬ್ಬ ಹಿಂದೂ ಧರ್ಮೀಯರ ಅಂಗಳದಲ್ಲಿ ತುಳಸಿ ಕಟ್ಟೆಯು ಶೋಭಿಸುತ್ತಿರುತ್ತದೆ.

ಮನೆಯ ಮುಂಭಾಗದಲ್ಲಿ ತುಳಸಿ ಗಿಡವಿದ್ದರೆ ಆ ಮನೆಯಲ್ಲಿ ಸದಾ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಿರುತ್ತದೆ. ಇದು ಮನೆಯೊಳಗಿನ ನಕಾರಾತ್ಮಕ ಶಕ್ತಿಯನ್ನು ಹೊರಹಾಕಿ ದೈವಿಕ ಸಂಚಲನವನ್ನು ಉಂಟುಮಾಡುತ್ತದೆ.

ದೈವಿಕ ಕೃಪೆಯ ಜೊತೆಗೆ, ತುಳಸಿಯು ಮನೆಯ ವಾತಾವರಣವನ್ನು ಶುದ್ಧೀಕರಿಸಿ ಮನೆಯ ಸದಸ್ಯರಿಗೆ ಉತ್ತಮ ಆರೋಗ್ಯವನ್ನು ಕರುಣಿಸುತ್ತದೆ.

ಮಂತ್ರ

ಓಂ ರೀಂ ಶ್ರೀಂ ಕ್ಲೀಂ ಶ್ರೀಂ ಲಕ್ಷ್ಮೀ, ಆಗಚ್ಯ, ಆಗಚ್ಯ ಮಮ ಮಂದಿರೆ, ತೀಸ್ತಾ, ತೀಸ್ತಾ ಸ್ವಾಹಃ ಈ ಮಂತ್ರ ಪಠಣೆ ಮಾಡಿ ಪ್ರತಿ ನಿತ್ಯ ತುಳಸಿ ಗಿಡಕ್ಕೆ ಪೂಜೆ ಮಾಡಿದ್ರೆ ದುಡಿದ ಹಣ ಉಳಿತಾಯವಾಗುತ್ತದೆ ಎಂದು ಜೋತಿಷ್ಯ ವಾಸ್ತು ಶಾಸ್ತ್ರ ಹೇಳುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular