ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಇಂದು ಬೆಳಿಗ್ಗೆ 8.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ, ರಷ್ಯಾದ ಕುರಿಲ್ ದ್ವೀಪಗಳು ಮತ್ತು ಜಪಾನ್ನ ದೊಡ್ಡ ಉತ್ತರ ದ್ವೀಪ ಹೊಕ್ಕೈಡೊದ ಕರಾವಳಿ ಪ್ರದೇಶಗಳಿಗೆ ಸುನಾಮಿ ಅಪ್ಪಳಿಸಿದೆ .
ಜಪಾನ್ ಹವಾಮಾನ ಸಂಸ್ಥೆಯು ಸುಮಾರು 30 ಸೆಂ.ಮೀ (ಸುಮಾರು 1 ಅಡಿ) ರಷ್ಟು ಮೊದಲ ಸುನಾಮಿ ಅಲೆ ಹೊಕ್ಕೈಡೊದ ಪೂರ್ವ ಕರಾವಳಿಯಲ್ಲಿರುವ ನೆಮುರೊವನ್ನು ತಲುಪಿದೆ ಎಂದು ಹೇಳಿದೆ. ಜಪಾನ್ ಕರಾವಳಿ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳುತ್ತಿದ್ದು, ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ.
ಪೆಸಿಫಿಕ್ನಲ್ಲಿರುವ ರಷ್ಯಾದ ಕುರಿಲ್ ದ್ವೀಪಗಳ ಮುಖ್ಯ ವಸಾಹತು ಸೆವೆರೊ-ಕುರಿಲ್ಸ್ಕ್ ಕರಾವಳಿ ಪ್ರದೇಶಕ್ಕೂ ಮೊದಲ ಸುನಾಮಿ ಅಲೆ ಅಪ್ಪಳಿಸಿದೆ ಎಂದು ಸ್ಥಳೀಯ ಗವರ್ನರ್ ವ್ಯಾಲೆರಿ ಲಿಮರೆಂಕೊ ಹೇಳಿದ್ದಾರೆ. ನಿವಾಸಿಗಳು ಸುರಕ್ಷಿತವಾಗಿದ್ದಾರೆ ಮತ್ತು ಎತ್ತರದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ಹೇಳಿದರು. ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ಕೂಡ ಸುನಾಮಿ ಎಚ್ಚರಿಕೆ ನೀಡಿವೆ.
❗️Underground TREMORS shook the coast of Avacha Bay after a STRONG 8.7M QUAKE
— RT (@RT_com) July 30, 2025
Tsunami threat in Kamchatka continues
Residents being EVACUATED https://t.co/PHmWoI73KO pic.twitter.com/pQ8xPpSCi2
रूस के सुदूर पूर्वी क्षेत्र कामचटका प्रायद्वीप में 8.7 तीव्रता का शक्तिशाली भूकंप, अमेरिका से जापान तक सुनामी की चेतावनी जारी#earthquake #tsunami #Russia #Japan #Hawaii #Alaska pic.twitter.com/4SyMnhKMPe
— डीडी न्यूज़ (@DDNewsHindi) July 30, 2025