HomeLatest Newsಮಕ್ಕಳಿಗೂ ಆರೋಗ್ಯಕರ ಈ ʼಚಪಾತಿʼ ಒಮ್ಮೆ ಟ್ರೈ ಮಾಡಿ ನೋಡಿ

ಮಕ್ಕಳಿಗೂ ಆರೋಗ್ಯಕರ ಈ ʼಚಪಾತಿʼ ಒಮ್ಮೆ ಟ್ರೈ ಮಾಡಿ ನೋಡಿ

ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಚಪಾತಿ ಮಾಡುತ್ತಿರುತ್ತಾರೆ. ರಾತ್ರಿ ಊಟಕ್ಕೆ, ಮಕ್ಕಳ ಲಂಚ್ ಬಾಕ್ಸ್ ಗೆ ಚಪಾತಿಯಂತು ಬೇಕೆ ಬೇಕು. ಕೆಲವು ಮಕ್ಕಳು ತರಕಾರಿಗಳನ್ನು ಹೆಚ್ಚು ತಿನ್ನುವುದಿಲ್ಲ.

ಅಂತಹ ಮಕ್ಕಳಿಗೆ ಚಪಾತಿ ಜತೆ ಈ ತರಕಾರಿಗಳನ್ನು ಸೇರಿಸಿದರೆ ಬಹಳ ಖುಷಿಯಿಂದ ತಿನ್ನುತ್ತವೆ. ಆರೋಗ್ಯಕ್ಕೂ ಒಳ್ಳೆಯದು ಬೇಗನೇ ಕೂಡ ಮಾಡಿಕೊಳ್ಳಬಹುದು.

ಬೇಕಾಗುವ ಸಾಮಾಗ್ರಿ: 1 ಮೂಲಂಗಿ, 1 ಕ್ಯಾರೆಟ್, ಅರ್ಧ ಕಟ್ಟು ಮೆಂತೆಸೊಪ್ಪು, ಸ್ವಲ್ಪ ಜೀರಿಗೆ, 2 ಕಪ್ ಗೋಧಿಹಿಟ್ಟು. ಸ್ವಲ್ಪ ನೀರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ: ಕ್ಯಾರೆಟ್, ಮೂಲಂಗಿಯನ್ನು ಚೆನ್ನಾಗಿ ತೊಳೆದು ಮೇಲಿನ ಸಿಪ್ಪೆ ತೆಗೆದುಕೊಳ್ಳಿ. ನಂತರ ತುರಿಯಿರಿ. ಒಂದು ಪಾತ್ರೆಗೆ ಗೋಧಿಹಿಟ್ಟು ಹಾಕಿ ಅದಕ್ಕೆ ತುರಿದ ಕ್ಯಾರೆಟ್, ಮೂಲಂಗಿ, ದಂಟು ಬೇರ್ಪಡಿಸಿಕೊಂಡ ಮೆಂತೆಸೊಪ್ಪಿನ ಎಲೆ, 1 ಟೀ ಸ್ಪೂನ್ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ. ಇದನ್ನು ಅರ್ಧ ಗಂಟೆ ಇಡುವ ಅಗತ್ಯವಿಲ್ಲ, ಚಪಾತಿ ಲಟ್ಟಿಸಿ ಕಾಯಿಸಿ. ರುಚಿಯಾದ ತರಕಾರಿ ಚಪಾತಿ ಸವಿಯಲು ಸಿದ್ಧವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular