HomeLatest News'ಗ್ಯಾಸ್ ಸಿಲಿಂಡರ್' ಬಳಸದೆ ಈ ಬ್ರೇಕ್ ಫಾಸ್ಟ್ ಟ್ರೈ ಮಾಡಿ..ಆರೋಗ್ಯಕ್ಕೂ ಒಳ್ಳೆಯದು !

‘ಗ್ಯಾಸ್ ಸಿಲಿಂಡರ್’ ಬಳಸದೆ ಈ ಬ್ರೇಕ್ ಫಾಸ್ಟ್ ಟ್ರೈ ಮಾಡಿ..ಆರೋಗ್ಯಕ್ಕೂ ಒಳ್ಳೆಯದು !

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನತೆಯಿಂದಾಗಿ ತೈಲ ಮತ್ತು ಅನಿಲದ (Gas) ಕೊರತೆ ಎದುರಾಗಿದ್ದು, ವಿಶ್ವದಾದ್ಯಂತ ಹಲವು ದೇಶಗಳು ತತ್ತರಿಸುತ್ತಿವೆ. ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದಾಗಿ ಈಗಾಗಲೇ ಪ್ರಮುಖ ನಗರಗಳಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಹಾಸ್ಟೆಲ್‌ಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಗ್ಯಾಸ್ ಅನ್ನು ಅತ್ಯಂತ ಜಾಗರೂಕತೆಯಿಂದ ಬಳಸಬೇಕೆಂದು ತಜ್ಞರು ಸಲಹೆ ನೀಡುತ್ತಿದ್ದಾರೆ.

ನಮಗೆ ಬೆಳಿಗ್ಗೆ ಎದ್ದಾಗಿನಿಂದ ಟೀ, ಕಾಫಿ, ತಿಂಡಿ, ಅಡುಗೆ ಹೀಗೆ ಪದೇ ಪದೇ ಗ್ಯಾಸ್ ಹಚ್ಚುವುದು ಅನಿವಾರ್ಯ. ಅದರಲ್ಲೂ ಬೆಳಗಿನ ಉಪಹಾರಕ್ಕೆ ಇಡ್ಲಿ, ದೋಸೆ, ಪೂರಿ ಅಥವಾ ವಡೆಯಂತಹ ತಿಂಡಿಗಳನ್ನು ತಿನ್ನುವ ಅಭ್ಯಾಸ ನಮಗಿದೆ. ಆದರೆ ಪ್ರಸ್ತುತ ಸಿಲಿಂಡರ್ ಕೊರತೆಯ ಸಮಯದಲ್ಲಿ ಇಂತಹ ತಿಂಡಿಗಳನ್ನು ಬದಿಗಿಟ್ಟು, ಗ್ಯಾಸ್ ಅಗತ್ಯವಿಲ್ಲದ ಪರ್ಯಾಯ ಆಹಾರಗಳತ್ತ ಗಮನಹರಿಸುವುದು ಉತ್ತಮ ಎಂದು ಹೇಳಲಾಗುತ್ತಿದೆ.

ಗ್ಯಾಸ್ ಉಳಿತಾಯದ ಜೊತೆಗೆ ಆರೋಗ್ಯವೂ ವೃದ್ಧಿ: ದೋಸೆ, ವಡೆಯಂತಹ ಎಣ್ಣೆಯುಕ್ತ ಪದಾರ್ಥಗಳ ಬದಲು ಈ ಕೆಳಗಿನ ಉಪಹಾರಗಳನ್ನು ಸೇವಿಸಲು ವೈದ್ಯರು ಸೂಚಿಸುತ್ತಿದ್ದಾರೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ಸಲಾಡ್‌ಗಳು ಮತ್ತು ಮೊಳಕೆ ಕಾಳುಗಳು: ಇವು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿವೆ.
  • ಸ್ಯಾಂಡ್‌ವಿಚ್ ಮತ್ತು ಬ್ರೆಡ್-ಜಾಮ್: ತಯಾರಿಸುವುದು ಸುಲಭ ಮತ್ತು ಗ್ಯಾಸ್ ಬೇಕಿಲ್ಲ.
  • ಮಿಶ್ರ ಹಣ್ಣುಗಳು ಮತ್ತು ಜ್ಯೂಸ್‌ಗಳು: ದೇಹಕ್ಕೆ ತಕ್ಷಣದ ಶಕ್ತಿ ನೀಡುತ್ತವೆ.
  • ಬೇಯಿಸಿದ ಮೊಟ್ಟೆಗಳು: ಎಲೆಕ್ಟ್ರಿಕ್ ಎಗ್ ಬಾಯ್ಲರ್ ಬಳಸಿ ಬೇಯಿಸಬಹುದು.

ಬೇಸಿಗೆಗೆ ಇದುವೇ ಬೆಸ್ಟ್: ಬೇಸಿಗೆಯ ದಿನಗಳಲ್ಲಿ ಇಂತಹ ಹಗುರವಾದ ಉಪಹಾರಗಳು ಬೇಗನೆ ಜೀರ್ಣವಾಗುತ್ತವೆ. ಅಲ್ಲದೆ, ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ಕಾಪಾಡಿಕೊಳ್ಳಲು ಇವು ಸಹಕಾರಿ. ಅನಿವಾರ್ಯ ಸಂದರ್ಭಗಳಲ್ಲಿ ಗ್ಯಾಸ್ ಬಳಸಿ ರಾಗಿ ಅಂಬಲಿಯಂತಹ ಆರೋಗ್ಯಕರ ಪಾನೀಯಗಳನ್ನು ತಯಾರಿಸಿಕೊಳ್ಳಬಹುದು. ಪ್ರಸ್ತುತ ಸನ್ನಿವೇಶದಲ್ಲಿ ಸ್ಟವ್ ಬಳಸದೆ ಸಿದ್ಧಪಡಿಸಬಹುದಾದ ಆಹಾರಕ್ಕೆ ಮೊದಲ ಆದ್ಯತೆ ನೀಡಿ ಎಂದು ತಜ್ಞರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular