HomeHealthಚುಮು ಚುಮು ಚಳಿಗೆ ಟ್ರೈ ಮಾಡಿ ಬಿಸಿ ಬಿಸಿ ‘ಲೆಮನ್ ಗ್ರಾಸ್ ಟೀ’

ಚುಮು ಚುಮು ಚಳಿಗೆ ಟ್ರೈ ಮಾಡಿ ಬಿಸಿ ಬಿಸಿ ‘ಲೆಮನ್ ಗ್ರಾಸ್ ಟೀ’

ಚುಮು ಚುಮು ಚಳಿಗೆ ಬಿಸಿ ಬಿಸಿ ಟೀ ಹೀರುತ್ತಿದ್ದರೆ ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ಲೆಮನ್ ಗ್ರಾಸ್ ಬಳಸಿ ಮಾಡುವ ಟೇಸ್ಟೀಯಾದ ಚಹಾ ಇದೆ. ನೀವೂ ಒಮ್ಮೆ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿಗಳು:

½ ಕಪ್-ಲೆಮನ್ ಗ್ರಾಸ್, ½ ಕಪ್ –ಪುದೀನಾ ಎಲೆ, 1 ಟೀ ಸ್ಪೂನ್-ಟೀ ಎಲೆ, ಬೆಲ್ಲ-ರುಚಿಗೆ ತಕ್ಕಷ್ಟು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ:

ಮೊದಲಿಗೆ 5 ಕಪ್ ನೀರಿಗೆ ಲೆಮನ್ ಗ್ರಾಸ್, ಪುದೀನಾ ಎಲೆ, ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ. 5 ಕಪ್ ನೀರು 3 ಕಪ್ ಆಗುವ ತನಕ ಸಣ್ಣ ಉರಿಯಲ್ಲಿ ಕುದಿಸಿ.

ನಂತರ ಇದನ್ನು ಗ್ಯಾಸ್ ನಿಂದ ಕೆಳಗಿಳಿಸಿ ಇದಕ್ಕೆ ಟೀ ಎಲೆಗಳನ್ನು ಹಾಕಿ ಮುಚ್ಚಳ ಮುಚ್ಚಿ 2 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಇದನ್ನು ಸೋಸಿಕೊಂಡು ಬಿಸಿ ಇರುವಾಗಲೇ ಕುಡಿಯಿರಿ.

For Latest News Updates, Join Our Whatsapp Community🚩
RELATED ARTICLES

Most Popular