ಇಂದು ( ಮೇ 4 ) ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟಗೊಳ್ಳುತ್ತಿವೆ.
ಈ ಪೈಕಿ ಭಾರೀ ಚರ್ಚೆಗೀಡಾಗಿದ್ದ ತಮಿಳುನಾಡಿನಲ್ಲಿ ಅಚ್ಚರಿಯ ಫಲಿತಾಂಶ ಹೊರಬೀಳುತ್ತಿದ್ದು, 234 ಸೀಟುಗಳ ಪೈಕಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ 110 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಡಿಎಂಕೆಯಂತಹ ಮಹಾ ಪಕ್ಷಕ್ಕೆ ಭಾರೀ ಟಕ್ಕರ್ ಕೊಟ್ಟಿದೆ. ಇನ್ನುಳಿದಂತೆ ಡಿಎಂಕೆ 66 ಹಾಗೂ ಎಐಎಡಿಎಂಕೆ 56 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿವೆ.
ಇನ್ನು ತಮಿಳುನಾಡಿನಲ್ಲಿ ಸರ್ಕಾರ ರಚಿಸಲು 118 ಮ್ಯಾಜಿಕ್ ನಂಬರ್ ಆಗಿದ್ದು, ಸದ್ಯ ಎಲ್ಲರ ಚಿತ್ರ ಟಿವಿಕೆ ಈ ನಂಬರ್ ದಾಟಲಿದೆಯಾ ಎಂಬುವುದರತ್ತ ಇದೆ.
ಹೀಗೆ ಟಿವಿಕೆ ತಮಿಳುನಾಡಿನಲ್ಲಿ ಅಬ್ಬರಿಸಿದ್ದು, ವಿಜಯ್ ಮನೆಗೆ ಅವರ ಆಪ್ತರು ಆಗಮಿಸಿ ಶುಭ ಕೋರಲಾರಂಭಿಸಿದ್ದಾರೆ. ಅದರಂತೆ ವಿಜಯ್ ಆಪ್ತೆಯೂ ಆಗಿರುವ ಹಾಗೂ ವಿಜಯ್ ವಿಚ್ಛೇದನಕ್ಕೆ ಕಾರಣವಾದ ನಟಿಯೂ ಎನಿಸಿಕೊಂಡಿರುವ ತ್ರಿಶಾ ವಿಜಯ್ ಮನೆಗೆ ಆಗಮಿಸಿದ್ದು, ಲವ್ ವದಂತಿಯ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಇನ್ನು ಇದಕ್ಕೂ ಮುನ್ನ ನಟಿ ತ್ರಿಶಾ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದ ಸುದ್ದಿ ಸಹ ವೈರಲ್ ಆಗಿತ್ತು. ಈ ಸುದ್ದಿ ಕೇಳುತ್ತಿದ್ದಂತೆ ವಿಜಯ್ ಅಭಿಮಾನಿಗಳು ವಿಜಯ್ ಗೆಲುವಿಗಾಗಿ ಪೂಜೆ ಆಗಿದೆ, ದೊಡ್ಡ ಅಂತರದ ಗೆಲುವು ಪಕ್ಕಾ ಎಂದು ಭವಿಷ್ಯ ನುಡಿದಿದ್ದರು.

