ಚೆನ್ನೈ: ತಮಿಳುನಾಡಿನಲ್ಲಿ ನಡೆದ ೭೯ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಟಿ ತ್ರಿಷಾ ಕೃಷ್ಣನ್ ಅವರ ಉಪಸ್ಥಿತಿ ಎಲ್ಲರ ಗಮನ ಸೆಳೆದಿದೆ. ಮುಖ್ಯಮಂತ್ರಿ ವಿಜಯ್ ಹಾಗೂ ಅವರ ಕುಟುಂಬದವರ ಜೊತೆ ಆಯೋಜಿಸಲಾಗಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತ್ರಿಷಾ, ತಮ್ಮ ಸಾಂಪ್ರದಾಯಿಕ ಉಡುಪಿನಿಂದಾಗಿ ವಿಶೇಷವಾಗಿ ಮಿಂಚಿದರು.
ಈ ಆಚರಣೆಯಲ್ಲಿ ತ್ರಿಷಾ ತೊಟ್ಟಿದ್ದ ಕೇಸರಿ ಬಣ್ಣದ ಸೀರೆ ಸಾಂಪ್ರದಾಯಿಕ ಕಳೆಯನ್ನು ಹೆಚ್ಚಿಸಿತ್ತು. ಕಾರ್ಯಕ್ರಮದ ಮುಂಭಾಗದ ಸಾಲಿನಲ್ಲಿ ವಿಜಯ್ ಅವರ ಪೋಷಕರ ಪಕ್ಕದಲ್ಲಿ ಕುಳಿತಿದ್ದ ತ್ರಿಷಾ, ಅವರೊಂದಿಗೆ ಆತ್ಮೀಯವಾಗಿ ಸಂಭಾಷಣೆ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಅನುಕೂಲಕರವಾಗಿ ಮೂಡಿಬಂದ ತ್ರಿವರ್ಣ ಸೊಬಗು ಕಾರ್ಯಕ್ರಮದಲ್ಲಿ ತ್ರಿಷಾ ಅವರ ಉಪಸ್ಥಿತಿಗಿಂತಲೂ ಹೆಚ್ಚಾಗಿ ಅಲ್ಲಿ ಕಂಡುಬಂದ ಒಂದು ಕಾಕತಾಳೀಯ ದೃಶ್ಯ ಪ್ರೇಕ್ಷಕರನ್ನು ಆಕರ್ಷಿಸಿದೆ. ತ್ರಿಷಾ ಕೇಸರಿ ಬಣ್ಣದ ಸೀರೆಯಲ್ಲಿ ಕುಳಿತಿದ್ದರೆ, ಅವರ ಪಕ್ಕದಲ್ಲಿದ್ದ ವಿಜಯ್ ತಂದೆ ಬಿಳಿ ಬಣ್ಣದ ಉಡುಪಿನಲ್ಲಿ ಹಾಗೂ ಅವರ ತಾಯಿ ಹಸಿರು ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಈ ಮೂವರ ಉಪಸ್ಥಿತಿಯು ಭಾರತದ ರಾಷ್ಟ್ರಧ್ವಜದ ತ್ರಿವರ್ಣಗಳಂತೆ ಆಕಸ್ಮಿಕವಾಗಿ ಮೂಡಿಬಂದದ್ದು ನೆರೆದಿದ್ದವರ ಹಾಗೂ ನೆಟ್ಟಿಗರ ಗಮನ ಸೆಳೆಯಿತು.
ಕಾರ್ಯಕ್ರಮಕ್ಕಾಗಿ ತ್ರಿಷಾ ಆಯ್ಕೆ ಮಾಡಿಕೊಂಡಿದ್ದ ಕಡು ಕೇಸರಿ ಬಣ್ಣದ ಸೀರೆ, ಅದಕ್ಕೆ ಹೊಂದುವಂತಹ ಬ್ಲೌಸ್, ಸಾಂಪ್ರದಾಯಿಕ ಚಿನ್ನದ ಆಭರಣಗಳು ಮತ್ತು ಸರಳ ಮೇಕ್ಅಪ್ ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು.
ಇತ್ತೀಚಿನ ದಿನಗಳಲ್ಲಿ ವಿಜಯ್ ಭಾಗವಹಿಸುವ ಪ್ರಮುಖ ಕಾರ್ಯಕ್ರಮಗಳಲ್ಲಿ ತ್ರಿಷಾ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಈ ಹಿಂದೆ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲೂ ತ್ರಿಷಾ ಭಾಗವಹಿಸಿದ್ದರು.
Actress Trisha arrived at the Independence Day celebration taking place in Chennai.
She was given a place above the category of Hon’ble ministers.
Enjoy the circus guys pic.twitter.com/glRiALrvCZ
— Chota Don (@choga_don) August 15, 2026
Orange white green color combinations la ukandhurkanga pic.twitter.com/VTnXQ1btbv
— TamilNadu Updates (@tn_updatess) August 15, 2026
Actress Trisha attended the Independence Day celebrations, and her seat was reportedly allotted in the front row beside the Chief Minister’s parents. The arrangement triggered widespread debate across social media and caused visible discomfort and disapproval among many people. pic.twitter.com/KLMu7DE4wN
— Sona🐾🇮🇳 (@sona_sebin) August 15, 2026

