ಲೋಕಲ್‌ನಲ್ಲಿ ಪ್ರಯಾಣ, 100 ರೂ. ಗೆ ಶರ್ಟ್ ಖರೀದಿ: ಕನಸಿನ ನಗರಿಯಲ್ಲಿ ಜಪಾನ್ ರಾಯಭಾರಿಯ ಅನುಭವ

ಭಾರತಕ್ಕೆ ಜಪಾನ್ ರಾಯಭಾರಿಯಾಗಿರುವ ಹಿರೋಶಿ ಸುಜ಼ುಕಿ ದೇಶ ಪರ್ಯಟನೆಯಲ್ಲಿ ನಿರತರಾಗಿದ್ದಾರೆ. ವಾರಣಾಸಿ ಭೇಟಿ ವೇಳೆ ಅಲ್ಲಿನ ಚಾಟ್‌ಗಳನ್ನು ಎಂಜಾಯ್ ಮಾಡಿದ್ದ ಸುಜ಼ುಕಿ ಇದೀಗ ದೇಶದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿದ್ದಾರೆ.

ಮುಂಬೈ ಉಪನಗರ ರೈಲಿನ ಫುಟ್‌ಬೋರ್ಡ್ ಮೇಲೆ ನಿಂತುಕೊಂಡು ತೆಗೆಸಿದ ಫೋಟೋವೊಂದನ್ನು ಟ್ವೀಟ್ ಮಾಡಿದ ಸುಜ಼ುಕಿ, ಇದೇ ವೇಳೆ 100 ರೂ.ಗೆ ಅಂಗಿಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಯೊಂದರ ಮುಂದೆ ಸಹ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ.

“ಚೌಕಾಶಿ ಮಾಡುವುದು ಹೇಗೆ,” ಎಂದು ಕ್ಯಾಪ್ಷನ್ ಕೊಟ್ಟು ಈ ಫೋಟೋಗಳನ್ನು ಸುಜ಼ುಕಿ ಟ್ವೀಟ್ ಮಾಡಿದ್ದಾರೆ.

ಜಪಾನ್ ರಾಯಭಾರಿಯ ಟ್ವೀಟ್ ನೋಡಿದ ದೇಸೀ ನೆಟ್ಟಿಗರು, ಮುಂಬೈಯಲ್ಲಿ ಹೇಗೆ ವ್ಯವಹರಿಸಬೇಕೆಂದು ತಮಗೆ ತಿಳಿದ ಸಲಹೆಗಳನ್ನು ಟ್ವೀಟ್‌ ಮಾಡಿದ್ದಾರೆ.

https://twitter.com/HiroSuzukiAmbJP/status/1664232545159122945?ref_src=twsrc%5Etfw%7Ctwcamp%5Etweetembed%7Ctwterm%5E1664233173411332097%7Ctwgr%5E6a4e967fcb0efc7fd0de341af2b3d3c0e6be7016%7Ctwcon%5Es2_&ref_url=https%3A%2F%2Fwww.indiatoday.in%2Ftrending-news%2Fstory%2Ftravelling-in-mumbai-local-to-buying-rs-100-shirts-how-japans-ambassador-enjoyed-his-stay-2388054-2023-06-02

https://twitter.com/tribalvoice99/status/1664464597972303873?ref_src=twsrc%5Etfw%7Ctwcamp%5Etweetembed%7Ctwterm%5E1664464597972303873%7Ctwgr%5E6a4e967fcb0efc7fd0de341af2b3d3c0e6be7016%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ftravelling-in-mumbai-local-to-buying-rs-100-shirts-how-japans-ambassador-enjoyed-his-stay-2388054-2023-06-02

https://twitter.com/dhaval94/status/1664319302932242433?ref_src=twsrc%5Etfw%7Ctwcamp%5Etweetembed%7Ctwterm%5E1664319302932242433%7Ctwgr%5E6a4e967fcb0efc7fd0de341af2b3d3c0e6be7016%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ftravelling-in-mumbai-local-to-buying-rs-100-shirts-how-japans-ambassador-enjoyed-his-stay-2388054-2023-06-02

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read