HomeLatest NewsBIG NEWS: ಹಳಿ ತಪ್ಪಿದ ಸರಕು ಸಾಗಾಣೆ ರೈಲಿನ 8 ಬೋಗಿಗಳು: ಪಾಟ್ನಾ-ದೆಹಲಿ ರೈಲು ಸಂಚಾರದಲ್ಲಿ...

BIG NEWS: ಹಳಿ ತಪ್ಪಿದ ಸರಕು ಸಾಗಾಣೆ ರೈಲಿನ 8 ಬೋಗಿಗಳು: ಪಾಟ್ನಾ-ದೆಹಲಿ ರೈಲು ಸಂಚಾರದಲ್ಲಿ ವ್ಯತ್ಯಯ

ಪಾಟ್ನಾ: ಸರಕು ಸಾಗಣೆ ರೈಲೊಂದು ಹಳಿ ತಪ್ಪಿರುವ ಘಟನೆ ಬಿಹಾರದ ಜಮೂಯಿ ಜಿಲ್ಲೆಯಲ್ಲಿ ನಡೆದಿದೆ. ರೈಲಿನ 8 ಬೋಗಿಗಳು ಹಳಿತಪ್ಪಿದ್ದು, ಹಲವು ರೈಲುಗಲ ಸಂಚಾರದಲ್ಲಿ ವ್ಯತ್ಯಯವುಂಟಾಗಿದೆ.

ಅಸನ್ಸೋಲ್ ವಿಭಾಗದ ಲಹಬೋನ್ ಹಾಗೂ ಸಿಮುಲ್ತಾಲಾ ನಿಲ್ದಾಣಗಳ ನಡುವೆ ಸರಕು ಸಾಹಣೆ ರೈಲು ಹಳಿ ತಪ್ಪಿದೆ. ಇದರಿಂದಾಗಿ ೨೦ಕ್ಕೂ ಹೆಚ್ಚು ರೈಲುಗಳ ಸಂಚಾರದಲ್ಲಿ ಅಡಚಣೆಯುಂಟಾಗಿದೆ. ಸಾವಿರಾರು ಪ್ರಯಾಣಿಕರು ಪರದಾಡಿದ್ದಾರೆ.

ಹೌರಾ-ಪಾಟ್ನಾ-ದೆಹಲಿ ರೈಲುಗಳ ಸಂಚಾರದಲ್ಲಿ ಭಾರಿ ವ್ಯತ್ಯಯವಾಗಿದೆ. ಹಳಿ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರವೇ ರೈಲುಗಳ ಸಂಚಾರ ಪುನರಾರಂಭವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular