HomeKarnatakaBig Update: ಬೆಂಗಳೂರಿನಿಂದ ಹೊರಡುವ ರೈಲುಗಳಲ್ಲಿ ಬದಲಾವಣೆ

Big Update: ಬೆಂಗಳೂರಿನಿಂದ ಹೊರಡುವ ರೈಲುಗಳಲ್ಲಿ ಬದಲಾವಣೆ

ಪ್ರಯಾಣಿಕರ ವಿಶೇಷ ಗಮನಕ್ಕೆ ನೈಋತ್ಯ ರೈಲ್ವೆ ಪ್ರಮುಖ ಮಾಹಿತಿಯೊಂದನ್ನು ನೀಡಿದೆ.  ಬೆಂಗಳೂರು ವಿಭಾಗದ ಮಲ್ಲಸಂದ್ರ ಮತ್ತು ಗುಬ್ಬಿ ನಿಲ್ದಾಣಗಳ ನಡುವೆ ಇರುವ ಲೆವೆಲ್ ಕ್ರಾಸಿಂಗ್ ಕಾಮಗಾರಿಯ ಹಿನ್ನೆಲೆಯಲ್ಲಿ ಹಲವು ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗಿದೆ.

ಹಲವು ರೈಲುಗಳು ರದ್ದಾಗಿವೆ. ಕೆಲವು ರೈಲುಗಳ ಸಂಚಾರ ಭಾಗಶಃ ರದ್ದು ಮಾಡಲಾಗಿದೆ. ಇನ್ನೂ ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ.

ರೈಲುಗಳ ಸಂಚಾರ ರದ್ದು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ರೈಲು ಸಂಖ್ಯೆ 16239/ 16240 ಚಿಕ್ಕಮಗಳೂರು-ಯಶವಂತಪುರ-ಚಿಕ್ಕಮಗಳೂರು ದೈನಂದಿನ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 12614 ಕೆಎಸ್‌ಆರ್‌ ಬೆಂಗಳೂರು-ಮೈಸೂರು ಒಡೆಯರ್ ದೈನಂದಿನ ಎಕ್ಸ್‌ಪ್ರೆಸ್ ರೈಲುಗಳನ್ನು ಏಪ್ರಿಲ್ 8 ಮತ್ತು 15ರಂದು ರದ್ದುಗೊಳಿಸಲಾಗಿದೆ.

* ರೈಲು ಸಂಖ್ಯೆ 66567 ಕೆಎಸ್‌ಆರ್‌ ಬೆಂಗಳೂರು-ತುಮಕೂರು ಮೆಮು ಮತ್ತು ರೈಲು ಸಂಖ್ಯೆ 66572 ತುಮಕೂರು-ಕೆಎಸ್‌ಆ‌ರ್ ಬೆಂಗಳೂರು ಮೆಮು ರೈಲುಗಳನ್ನು ಏಪ್ರಿಲ್ 8ರಂದು ರದ್ದುಗೊಳಿಸಲಾಗಿದೆ.

ರೈಲುಗಳ ಸಂಚಾರ ಭಾಗಶಃ ರದ್ದು

* ಏಪ್ರಿಲ್ 8, 11, 12 ಮತ್ತು 15 ರಂದು ರೈಲು ಸಂಖ್ಯೆ 20652 ತಾಳಗುಪ್ಪ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಅರಸೀಕೆರೆ ಮತ್ತು ಬೆಂಗಳೂರು ನಡುವೆ ರದ್ದಾಗಲಿದೆ. ಈ ರೈಲು ಅರಸೀಕೆರೆಯಲ್ಲಿ ತನ್ನ ಪ್ರಯಾಣ ಮುಕ್ತಾಯಗೊಳಿಸಲಿದೆ.

* ಏಪ್ರಿಲ್ 8, 11, 12 ಮತ್ತು 15 ರಂದು ರೈಲು ಸಂಖ್ಯೆ 12725 ಕೆಎಸ್‌ಆರ್ ಬೆಂಗಳೂರು-ಧಾರವಾಡ ಸಿದ್ದಗಂಗಾ ಎಕ್ಸ್‌ಪ್ರೆಸ್ ಬೆಂಗಳೂರು ಮತ್ತು ಅರಸೀಕೆರೆ ನಡುವೆ ರದ್ದಾಗಲಿದೆ. ಇದು ಬೆಂಗಳೂರಿನ ಬದಲಿಗೆ ಅರಸೀಕೆರೆಯಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.

* ಏಪ್ರಿಲ್ 8 ಮತ್ತು 15ರಂದು ರೈಲು ಸಂಖ್ಯೆ 12726 ಧಾರವಾಡ-ಕೆಎಸ್‌ಆರ್‌ ಬೆಂಗಳೂರು ಸಿದ್ಧಗಂಗಾ ಎಕ್ಸ್‌ಪ್ರೆಸ್ ಅರಸೀಕೆರೆ ಮತ್ತು ಬೆಂಗಳೂರು ನಡುವೆ ರದ್ದಾಗಲಿದ್ದು, ಅರಸೀಕೆರೆಯಲ್ಲಿ ಪ್ರಯಾಣ ಮುಕ್ತಾಯ.

ರೈಲುಗಳ ಮಾರ್ಗ ಬದಲಾವಣೆ

* ಏಪ್ರಿಲ್ 7 ಮತ್ತು 14 ರಂದು ವಾಸ್ಕೋಡಗಾಮ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17310 ವಾಸ್ಕೋಡಗಾಮ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಅರಸೀಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ. ರೈಲು ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇಲ್ಲ.

* ಏಪ್ರಿಲ್ 7 ಮತ್ತು 14 ರಂದು ವೇಲಂಕಣ್ಣಿಯಿಂದ ಹೊರಡುವ ರೈಲು ಸಂಖ್ಯೆ 17316 ವೇಲಂಕಣಿ – ವಾಸ್ಕೋಡಗಾಮ ವೀಕ್ಲಿ ಎಕ್ಸ್‌ಪ್ರೆಸ್ ಚಿಕ್ಕಬಾಣಾವರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇಲ್ಲ.

* ಏಪ್ರಿಲ್ 8 ಮತ್ತು ಏಪ್ರಿಲ್ 15ರಂದು ಹೊರಡುವ ರೈಲು ಸಂಖ್ಯೆ 20689 ಯಶವಂತಪುರ ಶಿವಮೊಗ್ಗ ಟೌನ್ ಡೈಲಿ ಎಕ್ಸ್‌ಪ್ರೆಸ್ ಚಿಕ್ಕಬಾಣಾವರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗದ ಮೂಲಕ ಸಂಚರಿಸಲಿದೆ. ತುಮಕೂರು ಮತ್ತು ತಿಪಟೂರಿನಲ್ಲಿ ನಿಲುಗಡೆ ಇರುವುದಿಲ್ಲ.

* ಏಪ್ರಿಲ್ 8 ಮತ್ತು ಏಪ್ರಿಲ್ 15 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 20676 ಮೈಸೂರು- ಬೆಳಗಾವಿ ವಿಶ್ವಮಾನವ್ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮೈಸೂರು, ಹೊಳೆನರಸೀಪುರ, ಹಾಸನ, ಅರಸೀಕೆರೆ ಮೂಲಕ ಚಲಿಸಲಿದೆ. ಪಾಂಡವಪುರದಿಂದ ತಿಪಟೂರಿನವರೆಗೆ ನಿಲುಗಡೆ ಇರುವುದಿಲ್ಲ.

ರೈಲುಗಳ ನಿಯಂತ್ರಣ

  • ಏಪ್ರಿಲ್ 10 ಮತ್ತು 11ರಂದು ವಾಸ್ಕೋಡಗಾಮದಿಂದ ಹೊರಡುವ ರೈಲು ಸಂಖ್ಯೆ 17310 ವಾಸ್ಕೋಡಗಾಮ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಮಾರ್ಗಮಧ್ಯೆ 20 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.
  • ಏಪ್ರಿಲ್ 11 ಮತ್ತು 12 ರಂದು ತೆರಳುವ ರೈಲು ಸಂಖ್ಯೆ 20689 ಯಶವಂತಪುರ-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.

ರೈಲುಗಳ ಮರು ವೇಳಾಪಟ್ಟಿ ಹೊಂದಾಣಿಕೆ

* ಏಪ್ರಿಲ್ 6 ಮತ್ತು 13ರಂದು ರೈಲು ಸಂಖ್ಯೆ 19667 ಉದಯಪುರ ಸಿಟಿ-ಮೈಸೂರು ಹಮ್‌ಸಫ‌ರ್ ಎಕ್ಸ್‌ಪ್ರೆಸ್ ರೈಲು ಉದಯಪುರದಿಂದ 200 ನಿಮಿಷ ತಡವಾಗಿ ಹೊರಡಲಿದೆ.

* ಏಪ್ರಿಲ್ 6 ಮತ್ತು 13 ರಂದು ರೈಲು ಸಂಖ್ಯೆ 22497 ಶ್ರೀಗಂಗಾನಗರ-ತಿರುಚ್ಚಿರಾಪಳ್ಳಿ ಹಮ್‌ಸಫರ್ ಎಕ್ಸ್‌ಪ್ರೆಸ್ ಶ್ರೀಗಂಗಾನಗರದಿಂದ 150 ನಿಮಿಷ ತಡವಾಗಿ ಹೊರಡಲಿದೆ.

* ಏಪ್ರಿಲ್ 8 ಮತ್ತು 15 ರಂದು ರೈಲು ಸಂಖ್ಯೆ 12649 ಯಶವಂತಪುರ-ಹಜರತ್ ನಿಜಾಮುದ್ದೀನ್ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ಯಶವಂತಪುರದಿಂದ 30 ನಿಮಿಷ ತಡವಾಗಿ ಹೊರಡಲಿದೆ. * ಏಪ್ರಿಲ್ 8 ಮತ್ತು 15ರಂದು ರೈಲು ಸಂಖ್ಯೆ 12777 ಹುಬ್ಬಳ್ಳಿ-ತಿರುವನಂತಪುರಂ ನಾರ್ತ್ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್ ಹುಬ್ಬಳ್ಳಿಯಿಂದ 60 ನಿಮಿಷ ತಡವಾಗಿ ಹೊರಡಲಿದೆ ಮತ್ತು ಮಾರ್ಗಮಧ್ಯೆ 40 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular