HomeLatest Newsರೈಲು ಪ್ರಯಾಣಿಕರೇ ಗಮನಿಸಿ: ಜು. 1ರಿಂದ ದೂರದ ಪ್ರಯಾಣಕ್ಕೆ ಟಿಕೆಟ್ ದರ ಏರಿಕೆ

ರೈಲು ಪ್ರಯಾಣಿಕರೇ ಗಮನಿಸಿ: ಜು. 1ರಿಂದ ದೂರದ ಪ್ರಯಾಣಕ್ಕೆ ಟಿಕೆಟ್ ದರ ಏರಿಕೆ

ನವದೆಹಲಿ: ಟಿಕೆಟ್ ದರ ಏರಿಕೆ ಮಾಡಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಜುಲೈ 1ರಿಂದ ಅನ್ವಯವಾಗುವಂತೆ ರೈಲ್ವೆ ಟಿಕೆಟ್ ಏರಿಕೆ ಮಾಡಲಾಗುವುದು. ಆದರೆ, ಎಲ್ಲಾ ಮಾದರಿಯ ರೈಲುಗಳ, ಎಲ್ಲಾ ರೀತಿಯ ಟಿಕೆಟ್ ಗಳ ದರ ಏರಿಕೆ ಮಾಡುವುದಿಲ್ಲ.

ಕಡಿಮೆ ದೂರದ, ಸಬ್ ಅರ್ಬನ್ ರೈಲ್ವೆ ಟಿಕೆಟ್ ದರ, ಪಾಸ್ ದರಗಳು ಹಿಂದಿನಂತೆಯೇ ಇರುತ್ತವೆ. ದೂರ ಪ್ರಯಾಣಕ್ಕೆ ಮಾತ್ರ ಅಂತರ ಮತ್ತು ಕ್ಲಾಸ್ ಆಧಾರದಲ್ಲಿ ಟಿಕೆಟ್ ದರ ಏರಿಕೆಯಾಗಲಿದೆ. ನಿರ್ದಿಷ್ಟವಾಗಿ ಸೆಕೆಂಡ್ ಕ್ಲಾಸ್ ನಲ್ಲಿ 500 ಕಿಲೋಮೀಟರ್ ಅಧಿಕ ದೂರ ಪ್ರಯಾಣಿಸಲು ಮೇಲ್ ಅಥವಾ ಎಕ್ಸ್ಪ್ರೆಸ್ ನ ಎಸಿ, ನಾನ್ ಎಸಿ ಕೋಚ್ ಗಳಿಗೆ ಟಿಕೆಟ್ ದರ ಹೆಚ್ಚಳ ಅನ್ವಯವಾಗುತ್ತದೆ.

ಎಸಿ ರಹಿತ ಮೇಲ್/ ಎಕ್ಸ್ಪ್ರೆಸ್ ರೈಲುಗಳಲ್ಲಿ ಪ್ರಯಾಣಿಸುವವರು ಪ್ರತಿ ಕಿಲೊಮೀಟರ್ ಗೆ ಹೆಚ್ಚುವರಿಯಾಗಿ ಒಂದು ಪೈಸೆ ಪಾವತಿಸಬೇಕು. ಎಲ್ಲ ಎಸಿ ದರ್ಜೆ ಪ್ರಯಾಣಿಕರಿಗೆ ಎಸಿ3 ಟೈಯರ್, 2 ಟೈಯರ್ ಅಥವಾ ಫಸ್ಟ್ ಕ್ಲಾಸ್ ಎಸಿ ಪ್ರತಿ ಕಿಲೋಮೀಟರ್ ಎರಡು ಪೈಸೆ ಹೆಚ್ಚಳವಾಗಲಿದೆ. ಸೆಕೆಂಡ್ ಕ್ಲಾಸ್ ಕೋಚ್ ಗಳ ಪ್ರಯಾಣ 500 ಕಿಲೋಮೀಟರ್ ಮೀರಿದಲ್ಲಿ ಪ್ರತಿ ಕಿಲೋಮೀಟರ್ ಅರ್ಧ ಪೈಸೆ ಏರಿಕೆಯಾಗಲಿದೆ. ಅಂದರೆ ಒಂದು ಸಾವಿರ ಕಿಲೋಮೀಟರ್ ಗೆ 2.50 ರೂ. ಹೆಚ್ಚಳವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular