ಇಂಡೋನೇಶಿಯಾ : ರೈಲ್ವೇ ಹಳಿಗಳ ಮೇಲೆ ಸಿಲುಕಿದ್ದ ಟ್ರಕ್’ಗೆ ರೈಲು ಡಿಕ್ಕಿ ಹೊಡೆದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದ್ದು, ಭಯಾನಕ ವೀಡಿಯೋ ವೈರಲ್ ಆಗಿದೆ.
ಈ ಘಟನೆ ಅಕ್ಟೋಬರ್ 21 ರಂದು ಸ್ಥಳೀಯ ಸಮಯ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ. ರೈಲು ಡಿಕ್ಕಿ ಹೊಡೆದ ಪರಿಣಾಮ ಅವಶೇಷಗಳು ಹಾರಿ ಬಿದ್ದಿದೆ. ಟ್ರಕ್ ಅನ್ನು ರೈಲು ಹಲವಾರು ಮೀಟರ್ಗಳಷ್ಟು ಎಳೆದುಕೊಂಡು ಹೋಗಿವೆ. ಪಕ್ಕದಲ್ಲಿದ್ದವರು ಸ್ಥಳಕ್ಕೆ ಧಾವಿಸುತ್ತಿರುವುದನ್ನು ಕಾಣಬಹುದು.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಹಳಿಗಳನ್ನು ದಾಟಲು ಪ್ರಯತ್ನಿಸುವಾಗ ಟ್ರಕ್ ಮುಂದಕ್ಕೆ ಚಲಿಸದೇ ನಿಂತಿದೆ. ಡಿಕ್ಕಿ ಹೊಡೆಯುವ ಕೆಲವೇ ಕ್ಷಣಗಳ ಮೊದಲು ಚಾಲಕ ಲಾರಿಯಿಂದ ಇಳಿದು ಸುರಕ್ಷಿತವಾಗಿ ಓಡಿಹೋದ. ಅದೃಷ್ಟವಶಾತ್, ಯಾವುದೇ ಸಾವುನೋವುಗಳು ವರದಿಯಾಗಿಲ್ಲ, ಮತ್ತು ಚಾಲಕ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾನೆ ಎಂದು ಹೇಳಲಾಗಿದೆ. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

