ರಾಂಚಿ: ಎರಡು ಗೂಡ್ಸ್ ರೈಲಿನ 20 ಬೋಗಿಗಳು ಹಳಿ ತಪ್ಪಿರುವ ಘಟನೆ ಜಾರ್ಖಂಡ್ ನ ಸೆರೈಕಲಾ-ಖಾರ್ಸ್ವಾನ್ ಜಿಲ್ಲೆಯ ಚಾಂಡಿಲ್ ನಿಲ್ದಾಣದ ಬಳಿ ನಡೆದಿದೆ.
ಗೂಡ್ಸ್ ರೈಲುಗಳ 20 ಬೋಗಿಗಳು ಹಳಿತಪ್ಪಿರುವ ಪರಿಣಾಮ ಆಗ್ನೇಯ ರೈಲ್ವೆಯ ಚಾಂಡಿಲ್-ಟಾಟಾನಗರ ನಡುವಿನ ರೈಲು ಸೇವೆಗಳಲ್ಲಿ ವ್ಯತ್ಯಯವುಂಟಾಗಿದೆ.
ರೈಲು ನಿಲ್ದಾಣದಿಂದ 200 ಮೀಟರ್ ದೂರದಲ್ಲಿ ಈ ಅವಘಡ ಸಂಭವಿಸಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಚಾಂಡಿಲ್ ರೈಲು ನಿಲ್ದಾಣಕ್ಕೆ ಬರುವ ಹಾಗೂ ನಿರ್ಗಮಿಸುವ ರೈಲುಗಳ ಸಂಚಾರಕ್ಕೆ ಅಡಿಚಣಿ ಉಂಟಾಗಿದೆ. ತಾತ್ಕಾಲಿಕವಾಗಿ ರೈಲುಗಳ ಸಂಚಾರ ಸ್ಥಗಿತವಾಗಿದೆ.
ಚಾಂಡಿ-ಟಾಟಾನಗರ, ಚಾಂಡೀಲ್-ಮುರಿ, ಚಾಂಡಿಲ್-ಪುರುಲಿಯಾ-ಬೊಕಾರೊ ಮಾರ್ಗಗಳ ನಡುವೆ ರೈಲು ಸೇವೆಯಲ್ಲಿ ವ್ಯತ್ಯಯವಾಗಿದೆ.