HomeLatest Newsಪ್ರಯಾಣಿಕರ ಗಮನಕ್ಕೆ: ಈ ರೈಲುಗಳ ಸಂಚಾರ ರದ್ದು

ಪ್ರಯಾಣಿಕರ ಗಮನಕ್ಕೆ: ಈ ರೈಲುಗಳ ಸಂಚಾರ ರದ್ದು

ಹುಬ್ಬಳ್ಳಿ: ಮೀರಜ್- ಕ್ಯಾಸಲ್ ರಾಕ್ ನಡುವಿನ ಹಲವು ರೈಲು ಸಂಚಾರಗಳನ್ನು ನೈರುತ್ಯ ರೈಲ್ವೆ ರದ್ದುಗೊಳಿಸಿದೆ. ಹುಬ್ಬಳ್ಳಿ ವಿಭಾಗದ ಕ್ಯಾಸಲ್ ರಾಕ್ ಮತ್ತು ಲೋಂಡಾ ನಡುವಿನ ಮಾರ್ಗದಲ್ಲಿ ನಡೆಯುತ್ತಿರುವ ದ್ವಿಪಥ ಕಾಮಗಾರಿ ಹಿನ್ನೆಲೆಯಲ್ಲಿ ಈ ಕೆಳಗಿನ ರೈಲುಗಳ ಸಂಚಾರ ರದ್ದಾಗಿವೆ.

ಈ ಹಿಂದೆ ನವೆಂಬರ್ 30, 2025ರವರೆಗೆ ಭಾಗಶಃ ರದ್ದುಗೊಳಿಸಲಾಗಿದ್ದ ರೈಲು ಸಂಖ್ಯೆ 17333 ಮೀರಜ್ – ಕ್ಯಾಸಲ್ ರಾಕ್ ಡೈಲಿ  ಎಕ್ಸ್ ಪ್ರೆಸ್  ಮತ್ತು ರೈಲು ಸಂಖ್ಯೆ 17334 ಕ್ಯಾಸಲ್ ರಾಕ್ – ಮೀರಜ್ ಡೈಲಿ  ಎಕ್ಸ್ ಪ್ರೆಸ್  ರೈಲುಗಳ ಭಾಗಶಃ ರದ್ದತಿಯನ್ನು ಈಗ ಡಿಸೆಂಬರ್ 1, 2025 ರಿಂದ ಫೆಬ್ರವರಿ 28, 2026 ರವರೆಗೆ ಮುಂದುವರಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಅವಧಿಯಲ್ಲಿ, ರೈಲು ಸಂಖ್ಯೆ 17333 ಮೀರಜ್–ಕ್ಯಾಸಲ್ ರಾಕ್ ಡೈಲಿ  ಎಕ್ಸ್ ಪ್ರೆಸ್  ರೈಲು ಲೋಂಡಾ ಮತ್ತು ಕ್ಯಾಸಲ್ ರಾಕ್ ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಇದು ಕ್ಯಾಸಲ್ ರಾಕ್ ಬದಲಾಗಿ ಲೋಂಡಾದಲ್ಲಿ ತನ್ನ ಸಂಚಾರವನ್ನು ಕೊನೆಗೊಳಿಸಲಿದೆ. ಅದೇ ರೀತಿ, ರೈಲು ಸಂಖ್ಯೆ 17334 ಕ್ಯಾಸಲ್ ರಾಕ್–ಮೀರಜ್ ಡೈಲಿ  ಎಕ್ಸ್ ಪ್ರೆಸ್  ರೈಲು ಸಹ ಕ್ಯಾಸಲ್ ರಾಕ್ ಮತ್ತು ಲೋಂಡಾ ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಇದು ಕ್ಯಾಸಲ್ ರಾಕ್ ಬದಲಿಗೆ ಲೋಂಡಾದಿಂದ ತನ್ನ ಸಂಚಾರವನ್ನು ಪ್ರಾರಂಭಿಸಲಿದೆ.

For Latest News Updates, Join Our Whatsapp Community🚩
RELATED ARTICLES

Most Popular