HomeEntertainmentಟಾಕ್ಸಿಕ್ ಸಿನಿಮಾದ 2ನೇ ಟೀಸರ್ ಬಿಡುಗಡೆ: ಎರಡು ಶೇಡ್ ನಲ್ಲಿ ಕಾಣಿಸಿಕೊಂಡ ರಾಕಿಂಗ್ ಸ್ಟಾರ್: ಅಭಿಮಾನಿಗಳಲ್ಲಿ...

ಟಾಕ್ಸಿಕ್ ಸಿನಿಮಾದ 2ನೇ ಟೀಸರ್ ಬಿಡುಗಡೆ: ಎರಡು ಶೇಡ್ ನಲ್ಲಿ ಕಾಣಿಸಿಕೊಂಡ ರಾಕಿಂಗ್ ಸ್ಟಾರ್: ಅಭಿಮಾನಿಗಳಲ್ಲಿ ಮತ್ತಷ್ಟು ಹೆಚ್ಚಿದ ನಿರೀಕ್ಷೆ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ಸಿನಿಮಾದ ಮತ್ತೊಂದು ಟೀಸರ್ ಬಿಡಿಗಡೆಯಾಗಿದೆ. ಇದು ಎರಡನೇ ಟೀಸರ್ ಆಗಿದ್ದು, ಈ ಟೀಸರ್ ವಿಭಿನ್ನವಾಗಿದೆ.

ಮೊದಲ ಟ್ರೇಲರ್ ಭಾರಿ ಚರ್ಚೆ ಹುಟ್ಟುಹಾಕಿತ್ತು. ಇದೀಗ ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದ್ದು, ಟಾಕ್ಸಿಕ್ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಈ ಹಿಂದೆ ಬಿಡುಗಡೆ ಆಗಿದ್ದ ಟೀಸರ್​ಗಿಂತ ಈ ಟೀಸರ್ ಭಿನ್ನವಾಗಿದ್ದು, ಯಶ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಂತಿದೆ. ಟೀಸರ್​​ನಲ್ಲಿ ಯಶ್ ಯಂಗ್ ಲುಕ್​​ನಲ್ಲಿಯೂ ಕಾಣಿಸಿಕೊಂಡಿದ್ದು, ರಾಯನ (ಯಶ್) ಮಗ ಇರಬಹುದೇ ಎಂಬ ಪ್ರಶ್ನೆ ಮೂಡಿದೆ. ಯಶ್ ಅವರು ಸಖತ್ ವೈಲೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಟೀಸರ್​​ನಲ್ಲಿ ಸಾಕಷ್ಟು ರಕ್ತ ಕೂಡ ಹರಿದಿದೆ.

ಟೀಸರ್ ನಲ್ಲಿ ‘ಈ ಸಲ ಯುದ್ಧನೇ ಬೇರೆ’ ಎಂಬ ಡೈಲಾಗ್ ಗಮನ ಸೆಳೆದಿದೆ. ‘ಟಾಕ್ಸಿಕ್’ ಟೀಸರ್ ನೋಡಿದವರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಹಠ ಬಿಡೋ ಮಾತೇ ಇಲ್ಲ’ ಎಂಬುದನ್ನು ಯಶ್ ಸ್ಪಷ್ಟವಾಗಿ ಹೇಳಿದ್ದಾರೆ. ಒಟ್ಟಾರೆ ಹೊಸ ಟೀಸರ್ ಗಮನ ಸೆಳೆಯುವುದರ ಜೊತೆಗೆ ಭಾರಿ ನಿರೀಕ್ಷೆ ಮೂಡಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular