ಬೆಂಗಳೂರು : ರಾಕಿಂಗ್ ಸ್ಟಾರ್ ನಟ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಬಹಳ ನಿರೀಕ್ಷೆ ಹುಟ್ಟಿಸಿದೆ. ಸದ್ಯ, ಗೋವಾದಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಿದೆ ಎನ್ನಲಾಗಿದ್ದು, ಇದರ ಫೋಟೋ, ವಿಡಿಯೋ ವೈರಲ್ ಆಗಿದೆ.
ವೈರಲ್ ಫೋಟೋದಲ್ಲಿ ನಟ ಯಶ್ ಕಾಣಿಸಿಕೊಂಡಿದ್ದು, ಫೋಟೋ, ವಿಡಿಯೋ ಹರಿದಾಡುತ್ತಿದೆ. ಗೋವಾದಲ್ಲಿ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ ಎನ್ನಲಾಗಿತ್ತು. ಮಲಯಾಳ ಮೂಲದ ನಟಿ, ನಿರ್ದೇಶಕಿ ಗೀತು ಮೋಹನ್ ದಾಸ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಡ್ರಗ್ ಮಾಫಿಯಾದ ಸುತ್ತಾ ಚಿತ್ರದ ಕಥೆ ಹೆಣೆಯಲಾಗಿದೆ. 2025 ರಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ.
https://twitter.com/sharadasrinidhi/status/1768315045216424012?ref_src=twsrc%5Etfw%7Ctwcamp%5Etweetembed%7Ctwterm%5E1768327001134276693%7Ctwgr%5E6365d22793e256579837c1782bff1a3fd8af64d0%7Ctwcon%5Es2_&ref_url=https%3A%2F%2Fvistaranews.com%2Fcinema-film%2Fsandalwood%2Ftoxic-movie-shooting-in-goa-set-video-goes-viral%2F609560.html