HomeLive Newsನಾಳೆ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ನಡುವಣ ಎರಡನೇ ಟಿ ಟ್ವೆಂಟಿ ಪಂದ್ಯ

ನಾಳೆ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ನಡುವಣ ಎರಡನೇ ಟಿ ಟ್ವೆಂಟಿ ಪಂದ್ಯ

ಕಳೆದ ವರ್ಷ ಏಕದಿನ ವಿಶ್ವ ಕಪ್ ವಿಜೇತರಾದ ಆಸ್ಟ್ರೇಲಿಯಾ ತಂಡದ ಗೆಲುವಿನ ಓಟ ಮುಂದುವರೆದಿದೆ. ಏಕದಿನ ಸರಣಿಗಳಲ್ಲಿ ಎದುರಾಳಿಗಳನ್ನು ಮಣ್ಣುಮುಕ್ಕಿಸುವ ಮೂಲಕ ಸಿಂಹಸ್ವಪ್ನರಾಗುತ್ತಿದ್ದಾರೆ.

ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ ಜೊತೆ ಏಕದಿನ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ ಜಯಭೇರಿ ಆಗುವ ಮೂಲಕ ಕ್ಲೀನ್ ಸ್ವೀಪ್ ಮಾಡಿದ್ದರು. ಇದೀಗ ನೆನ್ನೆ ನಡೆದ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ಕೇವಲ 11 ರನ್ ಗಳಿಂದ ರೋಚಕ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದೆ.

ನಾಳೆ ಅಡಿಲೈಡ್ ನಲ್ಲಿ ಎರಡನೇ ಟಿ ಟ್ವೆಂಟಿ ಪಂದ್ಯ ನಡೆಯಲಿದ್ದು, ಆಸ್ಟ್ರೇಲಿಯಾ ತಂಡ ಸರಣಿ ತನ್ನದಾಗಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ನಿನ್ನೆ ಪಂದ್ಯದಲ್ಲಿ ಭರ್ಜರಿ ಹೋರಾಟ ಕೊಟ್ಟಿರುವ ವೆಸ್ಟ್ ಇಂಡೀಸ್ ತಂಡ ಈ ಪಂದ್ಯವನ್ನು ಗೆದ್ದು ಸರಣಿ ಸಮಬಲಗೊಳಿಸಲಿದೆಯಾ ಕಾದುನೋಡಬೇಕಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular