HomeKarnatakaದರ ಗಗನಕ್ಕೇರುತ್ತಿದ್ದಂತೆ `ಟೊಮ್ಯಾಟೊ' ಕಳ್ಳತನಕ್ಕೆ ಇಳಿದ ಕದೀಮರು!

ದರ ಗಗನಕ್ಕೇರುತ್ತಿದ್ದಂತೆ `ಟೊಮ್ಯಾಟೊ’ ಕಳ್ಳತನಕ್ಕೆ ಇಳಿದ ಕದೀಮರು!

ಹಾಸನ: ಕರ್ನಾಟಕ ಸೇರಿದಂತೆ ದೇಶಾದ್ಯಂತ ಟೊಮ್ಯಾಟೊ ದರ ಗಗನಕ್ಕೇರಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿರುವ ಕದೀಮರು ಹೊಲಕ್ಕೆ ನುಗ್ಗಿ ಟೊಮ್ಯಾಟೊ ಕಳ್ಳತನ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಬೇಲೂರು ಸಮೀಪದ ಗೋಣಿ ಸೋಮನಹಳ್ಳಿಯ ಧರಣಿ ಎಂಬುವರ ತೋಟಕ್ಕೆ ನುಗ್ಗಿದ್ದ ಕಳ್ಳರು 50-60 ಬ್ಯಾಗ್ ಗಳಷ್ಟು ಟೊಮ್ಯಾಟೊಗಳನ್ನು ಕಳ್ಳತನ ಮಾಡಿದ್ದಾರೆ. ಕಳ್ಳತನ ಮಾಡಿರುವ ಟೊಮ್ಯಾಟೊ ಮೌಲ್ಯ 1.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಧರಣಿ ಎಂಬುವರ ಜಮೀನಿನಲ್ಲಿ ಟೊಮ್ಯಾಟೊ ಬೆಳೆಯಲಾಗಿತ್ತು. ಕಳೆದ ರಾತ್ರಿ ಕದೀಮರು 1.5 ಲಕ್ಷ ರೂ. ಮೌಲ್ಯದ ಟೊಮ್ಯಾಟೊ ಕಳ್ಳತನ ಮಾಡಲಾಗಿದ್ದು, ಹಳೇಬೀಡು ಪೊಲೀಸ್ ಠಾಣೆಗೆ ಹೊಲದ ಮಾಲೀಕರು ದೂರು ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular