HomeAstroಈ ರಾಶಿಯ ವಿದ್ಯಾರ್ಥಿಗಳಿಗಿದೆ ಇಂದು ಉತ್ತಮ ಅವಕಾಶ

ಈ ರಾಶಿಯ ವಿದ್ಯಾರ್ಥಿಗಳಿಗಿದೆ ಇಂದು ಉತ್ತಮ ಅವಕಾಶ

ಮೇಷ : ಉದ್ಯಮದಲ್ಲಿ ಹೊಸ ಒಪ್ಪಂದಕ್ಕೆ ಸಹಿ ಹಾಕಲಿದ್ದೀರಿ. ಇದರಿಂದ ನಿಮಗೆ ಮುಂದಿನ ದಿನಗಳಲ್ಲಿ ಹಣದ ಹರಿವು ಹೆಚ್ಚಲಿದೆ. ಸಿಕ್ಕ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವ ನಿಮ್ಮ ಗುಣ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ.

ವೃಷಭ: ಇಂದು ನೀವು ನಿಮ್ಮ ಸಂಗಾತಿಯ ಜೊತೆ ಹೆಚ್ಚಿನ ಸಮಯ ಕಳೆಯಲಿದ್ದೀರಿ. ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಜೊತೆ ಮನಸ್ತಾಪ ಉಂಟಾಗಬಹದು. ಇಂದಿನ ದಿನ ನಿಮಗೆ ಕೊಂಚ ಒತ್ತಡದಾಯಕ ಎನಿಸಲಿದೆ. ಪೋಷಕರ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.

ಮಿಥುನ : ಆರೋಗ್ಯ ಹದಗೆಡುವ ಹಿನ್ನೆಲೆಯಲ್ಲಿ ಇಂದು ನಿಮಗೆ ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗೋದಿಲ್ಲ. ಯಾವುದೇ ಕಾರಣಕ್ಕೂ ಸಮಯ ವ್ಯರ್ಥ ಮಾಡಬೇಡಿ. ವ್ಯಾಪಾರದಲ್ಲಿ ನೀವು ಮಾಡುವ ಚಿಕ್ಕ ತಪ್ಪು ಸಹ ಮುಂದಿನ ದಿನಗಳಲ್ಲಿ ಭಾರೀ ನಷ್ಟ ತಂದೊಡ್ಡಬಹುದು. ಕುಟುಂಬಸ್ಥರ ಜೊತೆ ಒಳ್ಳೆಯ ಸಮಯ ಕಳೆಯುತ್ತೀರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಟಕ : ಇಂದಿನ ದಿನ ನಿಮಗೆ ಒತ್ತಡದಾಯಕವಾಗಿದ್ದರೂ ಸಹ ಲಾಭದಾಯಕವಾಗಿ ಇರಲಿದೆ. ಸಂಗಾತಿಯ ಜೊತೆ ಮನಸ್ತಾಪ ಉಂಟಾಗಲಿದೆ. ಇದರಿಂದ ನಿಮಗೆ ಅಸಮಾಧಾನ ಉಂಟಾಗಲಿದೆ. ಪ್ರಭಾವಿ ವ್ಯಕ್ತಿಗಳ ಸಹಾಯದಿಂದ ಕಷ್ಟದ ಕೆಲಸಗಳನ್ನು ಸುಲಭ ಮಾಡಿಕೊಳ್ಳಲಿದ್ದೀರಿ.

ಸಿಂಹ : ಸಂಗಾತಿಯಿಂದ ನೀವು ಅನಿರೀಕ್ಷಿತ ಉಡುಗೊರೆ ಸಿಗಲಿದೆ. ಪ್ರಿಯತಮೆ ಜೊತೆ ಮನಸ್ತಾಪ ಉಂಟಾಗಲಿದೆ. ದಾಯಾದಿಯ ಜೊತೆ ಆಸ್ತಿ ವಿಚಾರವಾಗಿ ಕಲಹ ಉಂಟಾಗಲಿದೆ. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಭಾದಿಸಲಿದೆ. ದುಶ್ಚಟಗಳಿಂದ ಆದಷ್ಟು ದೂರವಿರಿ.

ಕನ್ಯಾ : ನಿಮ್ಮ ಕುಟುಂಬಸ್ಥರು ನಿಮ್ಮಿಂದ ಸಂತುಷ್ಟರಾಗಲಿದ್ದಾರೆ. ಹಳೆಯ ಕಹಿ ನೆನಪುಗಳು ಮತ್ತೆ ನಿಮ್ಮ ಮುಂದೆ ಬರಬಹುದು. ವೈವಾಹಿಕ ಜೀವನ ಉತ್ತಮ ಗತಿಯಲ್ಲಿ ಸಾಗಲಿದೆ. ಹೊಸ ಉದ್ಯಮಕ್ಕೆಂದು ಅರಸುತ್ತಿದ್ದವರಿಗೆ ಶುಭ ಸುದ್ದಿ ಕಾದಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಇದೆ.

ತುಲಾ : ಆರ್ಥಿಕ ಸಂಕಷ್ಟದಿಂದಾಗಿ ಒತ್ತಡಕ್ಕೆ ಸಿಲುಕಲಿದ್ದೀರಿ. ನಿಮ್ಮ ಕಷ್ಟಕ್ಕೆ ಸ್ನೇಹಿತರು ಹೆಗಲು ನೀಡಲಿದ್ದಾರೆ. ತೆರಿಗೆ ವಿಚಾರದಲ್ಲಿ ನೀವು ಗಮನ ನೀಡಲೇಬೇಕು. ಬಿಡುವಿನ ಸಮಯದಲ್ಲಿ ಮಕ್ಕಳ ಜೊತೆ ಕಾಲ ಕಳೆಯಲಿದ್ದೀರಿ. ವಾಹನ ಖರೀದಿ ಮಾಡುವ ಸಾಧ್ಯತೆ ಇದೆ.

ವೃಶ್ಚಿಕ : ಇಂದು ನಿಮಗೆ ಪ್ರಯಾಣ ಮಾಡೋಕೆ ಶುಭ ದಿನವಲ್ಲ. ಹೀಗಾಗಿ ವಾಹನದಿಂದ ಕೊಂಚ ದೂರವೇ ಇರಿ. ಸಾರ್ವಜನಿಕ ಪ್ರದೇಶದಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಆದಷ್ಟು ಹಣ ಉಳಿತಾಯ ಮಾಡುವ ಬಗ್ಗೆ ಯೋಚನೆ ಮಾಡಿ. ಈ ಯೋಚನೆಯು ಮುಂದಿನ ದಿನಗಳಲ್ಲಿ ನಿಮಗೆ ಒಳಿತು ತರಲಿದೆ.

ಧನು : ಸಂಗಾತಿಯು ನಿಮ್ಮಿಂದ ಮನನೊಂದಿದ್ದಾರೆ. ಆದಷ್ಟು ಅವರನ್ನು ಸಂತೈಸಲು ಯತ್ನಿಸಿ. ಉತ್ತಮ ಅವಕಾಶಕ್ಕಾಗಿ ಅರಸುತ್ತಿರುವ ವಿದ್ಯಾರ್ಥಿಗಳಿಗೆ ಇದು ಶುಭ ದಿನ. ಕಲಾವಿದರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ. ಆಭರಣ ಖರೀದಿ ಮಾಡಲಿದ್ದೀರಿ.

ಮಕರ : ನಿಮ್ಮ ಬಹುದಿನಗಳ ಕನಸು ನನಸಾಗಲಿದೆ. ಇದರಿಂದ ನೀವು ತುಂಬಾ ಖುಷಿಯಲ್ಲಿ ಇರಲಿದ್ದೀರಿ. ಪ್ರಯಾಣಕ್ಕೆ ಇದು ಯೋಗ್ಯ ದಿನವಲ್ಲ.

ಕುಂಭ : ಎಲೆಕ್ಟ್ರಾನಿಕ್​ ಉದ್ಯಮಿಗಳಿಗೆ ಇದು ಯೋಗ್ಯ ದಿನವಾಗಿದೆ. ವೈದ್ಯಕೀಯ ವೃತ್ತಿಯಲ್ಲಿ ಅವಕಾಶಗಳು ಹುಡುಕಿಕೊಂಡು ಬರಲಿದೆ. ರಾಜಕಾರಣಿಗಳು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ಗಿಟ್ಟಿಸಿಕೊಳ್ಳಲಿದ್ದಾರೆ. ವೈವಾಹಿಕ ಜೀವನ ನೆಮ್ಮದಿಯಿಂದ ಸಾಗಲಿದೆ.

ಮೀನ : ಮನೆಯ ಕಿರಿಯ ಸದಸ್ಯರಿಂದ ಶುಭ ವಾರ್ತೆಯನ್ನು ಕೇಳಲಿದ್ದೀರಿ. ನವದಂಪತಿಗೆ ಸಂತಾನ ಭಾಗ್ಯವಿದೆ. ವಿವಾಹಕ್ಕಾಗಿ ಅರಸುತ್ತಿರುವವರಿಗೆ ವೈವಾಹಿಕ ಸಂಬಂಧ ಕೂಡಿ ಬರಲಿದೆ. ಶಿಕ್ಷಕರಿಗೆ ಇದು ಒಳ್ಳೆಯ ದಿನವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular