HomeAstroಇಂದು ಈ ರಾಶಿಯವರಿಗಿದೆ ವಿವಿಧ ಕ್ಷೇತ್ರಗಳಲ್ಲಿ ಲಾಭ

ಇಂದು ಈ ರಾಶಿಯವರಿಗಿದೆ ವಿವಿಧ ಕ್ಷೇತ್ರಗಳಲ್ಲಿ ಲಾಭ

ಮೇಷ ರಾಶಿ

ಕುಟುಂಬದವರೊಂದಿಗಿನ ವಾದ ವಿವಾದದಿಂದ ಮನಸ್ಸಿಗೆ ನೋವುಂಟಾಗಲಿದೆ. ಎದೆಯಲ್ಲಿ ನೋವು ಅಥವಾ ಇನ್ನಿತರ ವ್ಯಗ್ರತೆಯಿಂದ ಅಸ್ವಸ್ಥತೆ ಅನುಭವಿಸುತ್ತೀರಿ. ಅನಾವಶ್ಯಕವಾಗಿ ಹಣ ಖರ್ಚಾಗಲಿದೆ.

ವೃಷಭ ರಾಶಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇವತ್ತು ಕೈಗೊಂಡ ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ಸಿಗಲಿದೆ. ಪ್ರತಿಸ್ಪರ್ಧಿಗಳೆದುರು ನಿಮಗೆ ಜಯ ಸಿಗಲಿದೆ. ಸಾಮಾಜಿಕವಾಗಿಯೂ ಗೌರವ ದೊರೆಯಲಿದೆ. ಆದ್ರೆ ಮಧ್ಯಾಹ್ನದ ನಂತರ ಕಲಹದ ವಾತಾವರಣ ಸೃಷ್ಟಿಯಾಗಬಹುದು.

ಮಿಥುನ ರಾಶಿ

ಬೆಳಗಿನ ಸಮಯದಲ್ಲಿ ನಿಮ್ಮ ಮನಸ್ಸು ಕ್ರೋಧದಿಂದ ಕೂಡಿರುತ್ತದೆ. ಶಾರೀರಿಕ ಮತ್ತು ಮಾನಸಿಕವಾಗಿ ವ್ಯಗ್ರತೆಯ ಅನುಭವವಾಗಲಿದೆ. ವ್ಯರ್ಥವಾಗಿ ಹಣ ಖರ್ಚಾಗಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲ ದೊರೆಯುವುದಿಲ್ಲ.

ಕರ್ಕ ರಾಶಿ

ಇವತ್ತು ಆನಂದವಾಗಿ ದಿನ ಕಳೆಯಲಿದ್ದೀರಿ. ಸಂವೇದನಶೀಲತೆ ಕೂಡ ಹೆಚ್ಚಾಗಿರುತ್ತದೆ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಸ್ನೇಹಿತರು ಮತ್ತು ಆತ್ಮೀಯರನ್ನು ಭೇಟಿಯಾಗಲಿದ್ದೀರಿ.

ಸಿಂಹ ರಾಶಿ

ಮಾತು ಮತ್ತು ವರ್ತನೆ ಮೇಲೆ ಸಂಪೂರ್ಣ ಸಂಯಮವಿರಲಿ. ಸ್ನೇಹಿತರಿಂದ ಮನಸ್ಸಿಗೆ ನೋವುಂಟಾಗುವಂತಹ ಪ್ರಸಂಗ ಎದುರಾಗಬಹುದು. ಖರ್ಚು ಹೆಚ್ಚಾಗಲಿದೆ. ಮನಸ್ಸಿನಲ್ಲಿರುವ ಭ್ರಾಂತಿಯನ್ನು ಹೊಡೆದೋಡಿಸಿ.

ಕನ್ಯಾ ರಾಶಿ

ವಿವಿಧ ಕ್ಷೇತ್ರಗಳಲ್ಲಿ ಲಾಭವಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಲಾಭವಾಗಲಿದೆ. ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ. ಮಿತ್ರವರ್ಗಕ್ಕಾಗಿ ವ್ಯಯಿಸುವ ಹಣದಿಂದ ನಿಮಗೂ ಅನುಕೂಲವಾಗಲಿದೆ. ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.

ತುಲಾ ರಾಶಿ

ಇವತ್ತು ನಿಮಗೆ ಶುಭದಿನ. ಧಾರ್ಮಿಕ ಕಾರ್ಯ ಮತ್ತು ದೇವರ ದರ್ಶನದಿಂದ ಪ್ರಯೋಜನವಾಗಲಿದೆ. ವಿವಿಧ ಕ್ಷೇತ್ರಗಳಲ್ಲಿ ಲಾಭವಾಗುವ ಸಾಧ್ಯತೆ ಇದೆ. ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ ಸಿಗಲಿದೆ. ಪದೋನ್ನತಿ ದೊರೆಯಬಹುದು.

ವೃಶ್ಚಿಕ ರಾಶಿ

ಇವತ್ತು ನಿಮಗೆ ಶುಭದಿನ. ಧಾರ್ಮಿಕ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ವಿದೇಶಕ್ಕೆ ತೆರಳಲು ಪರಿಸ್ಥಿತಿ ಅನುಕೂಲಕರವಾಗಿದೆ. ಮೇಲಧಿಕಾರಿಗಳು ನಿಮ್ಮ ಕೆಲಸದಿಂದ ಪ್ರಸನ್ನರಾಗುತ್ತಾರೆ. ನಿಮ್ಮನ್ನು ಪ್ರೋತ್ಸಾಹಿಸುತ್ತಾರೆ.

ಧನು ರಾಶಿ

ಇವತ್ತು ಯಾವುದೇ ಹೊಸ ಕಾರ್ಯವನ್ನು ಆರಂಭಿಸಬೇಡಿ. ಹತಾಶೆ ಮತ್ತು ತಪ್ಪಿತಸ್ಥ ಭಾವನೆ ಮನಸ್ಸಿನಲ್ಲಿ ಆವರಿಸಲಿದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಕುಟುಂಬದವರೊಂದಿಗೆ ವಾದ ವಿವಾದ ಬೇಡ. ಮಧ್ಯಾಹ್ನದ ನಂತರ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಮಕರ ರಾಶಿ

ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ. ಮನಸ್ಸಿಗೆ ಆನಂದ ನೀಡುವಂತಹ ಮನರಂಜನೆ ದೊರೆಯಲಿದೆ. ಪಾಲುದಾರಿಕೆಯಿಂದ ಲಾಭವಿದೆ. ಮನಸ್ಸಿನಲ್ಲಿ ಆತಂಕ ಆವರಿಸಬಹುದು. ಉದ್ಯಮದಲ್ಲೂ ಯಶಸ್ಸು ನಿಮ್ಮದಾಗಲಿದೆ.

ಕುಂಭ ರಾಶಿ

ಇವತ್ತು ಕೈಗೊಂಡ ಕಾರ್ಯಗಳಲ್ಲಿ ಸಂಪೂರ್ಣ ಯಶಸ್ಸು ದೊರೆಯುತ್ತದೆ. ವ್ಯಾಪಾರಿಗಳಿಗೆ ಕೂಡ ಇವತ್ತು ಶುಭದಿನ. ಮಾನಸಿಕ ಮತ್ತು ಶಾರೀರಿಕವಾಗಿ ಆರೋಗ್ಯದಿಂದಿರುತ್ತೀರಿ. ವಿಚಾರ ಮತ್ತು ವ್ಯವಹಾರದಲ್ಲಿ ಭಾವುಕತೆ ಅಧಿಕವಾಗಿರುತ್ತದೆ.

ಮೀನ ರಾಶಿ

ನಿಮ್ಮ ಮನಸ್ಸಿನಲ್ಲಿ ಅಶಾಂತಿ ಮತ್ತು ಉದ್ವೇಗ ಮೂಡಲಿದೆ. ಆಕಸ್ಮಿಕವಾಗಿ ಹಣ ಖರ್ಚಾಗಬಹುದು. ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಮಧ್ಯಾಹ್ನದ ನಂತರ ಮನೆಯಲ್ಲಿ ಆನಂದ ಮತ್ತು ನೆಮ್ಮದಿಯ ವಾತಾವರಣವಿರುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular