HomeLive Newsಇಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟಿ ಟ್ವೆಂಟಿ ಪಂದ್ಯ

ಇಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟಿ ಟ್ವೆಂಟಿ ಪಂದ್ಯ

ಮೊನ್ನೆ ನಡೆದ ಮೊದಲ ಟಿ ಟ್ವೆಂಟಿ ಪದ್ಯದಲ್ಲಿ ಯುವ ಭಾರತ ತಂಡ 61 ರನ್ ಗಳಿಂದ ಜಯಭೇರಿಯಾಗಿದ್ದು,  ದಕ್ಷಿಣ ಆಫ್ರಿಕಾ ತಂಡವನ್ನು ಅವರ ನೆಲದಲ್ಲೇ ಬಗ್ಗು ಬಡಿದಿದೆ. ಈ ಮೂಲಕ ಭಾರತ ತಂಡ 1-0 ಇಂದ ಮುನ್ನಡೆ ಸಾಧಿಸಿದೆ. ಇಂದು ಎರಡನೇ ಟಿ ಟ್ವೆಂಟಿ ಪಂದ್ಯ ನಡೆಯಲಿದ್ದು, ಭಾರತ ತಂಡ ಮತ್ತೊಂದು ಜಯದ ಲೆಕ್ಕಾಚಾರದಲ್ಲಿದೆ.

ದಕ್ಷಿಣ ಆಫ್ರಿಕಾ ತಂಡಕ್ಕೆ ತನ್ನ ಓಂ ಗ್ರೌಂಡ್ ನಲ್ಲಿ ಮೊದಲ ಟಿ ಟ್ವೆಂಟಿ  ಪದ್ಯದಲ್ಲೇ ಮುಖಭಂಗವಾಗಿದ್ದು,  ಭಾರತದ ಬೌಲಿಂಗ್ ದಾಳಿಗೆ ಉತ್ತರವೇ ಸಿಗದಂತಾಗಿದೆ. ದಕ್ಷಿಣ ಆಫ್ರಿಕಾ ತಂಡ ಇಂದು ಯಾವ ರೀತಿಯ ಯೋಜನೆ ರೂಪಿಸಲಿದ್ದಾರೆ. ಕಾದುನೋಡಬೇಕಾಗಿದೆ. ಭಾರತದ ಸ್ಪಿನ್ನರ್ ಗಳು ದಕ್ಷಿಣ ಆಫ್ರಿಕಾದ ಕ್ರೀಡಾಂಗಣದಲ್ಲಿ ಮಿಂಚುತ್ತಿದ್ದು,  ಇಂದು ಮತ್ತೊಂದು ರೋಮಾಂಚನಕಾರಿ ಪಂದ್ಯವನ್ನು ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular