HomeLive Newsಇಂದು ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ನಡುವಣ ಅಂತಿಮ ಏಕದಿನ ಹಣಾಹಣಿ

ಇಂದು ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ನಡುವಣ ಅಂತಿಮ ಏಕದಿನ ಹಣಾಹಣಿ

ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ನಡುವಣ ಏಕದಿನ ಪಂದ್ಯಗಳು ಭರ್ಜರಿ ಮನರಂಜನೆ ನೀಡುತ್ತಿದ್ದು, ಒಂದಕ್ಕಿಂತ ಒಂದು ರೋಚಕತೆಯಿಂದ ಸಾಗುತ್ತಿವೆ. ಏಕದಿನ ಸರಣಿಯಲ್ಲಿ ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡ ತಲಾ ಒಂದೊಂದು ಪಂದ್ಯದಲ್ಲಿ ಜಯ ಕಾಣುವ ಮೂಲಕ  ಸರಣಿ ಸಮಬಲ ಮಾಡಿಕೊಂಡಿದ್ದು, ಅಂತಿಮ ಏಕದಿನ  ಪಂದ್ಯಕ್ಕೆ ಸಜ್ಜಾಗಿವೆ.

ಇಂದು ಶಾರ್ಜಾ ಕ್ರೀಡಾಂಗಣದಲ್ಲಿ ಅಂತಿಮ ಏಕದಿನ ಪಂದ್ಯ ನಡೆಯಲಿದ್ದು,ಸರಣಿ ಗೆಲ್ಲಲು ಉಭಯ ತಂಡಗಳು ಭರ್ಜ ರಿ ಹೋರಾಟ ನಡೆಸಲಿವೆ. ಆಫ್ಘಾನಿಸ್ತಾನ ತಂಡದಲ್ಲಿ ಸ್ಪಿನ್ನರ್ ಗಳೇ ಪ್ರಮುಖ ಅಸ್ತ್ರವಾಗಿದ್ದು, ಬಾಂಗ್ಲಾದೇಶ ತಂಡದ ಬ್ಯಾಟ್ಸ್ಮ್ನ್ ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಎರಡು ತಂಡಕ್ಕೂ ಇಂದು ಬಹು ಮುಖ್ಯ ಪಂದ್ಯವಾಗಿದ್ದು, ಜಿದ್ದಾಜಿದ್ದಿ ಹೋರಾಟ ಇದ್ದೇ ಇರುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular