HomeKarnatakaರಾಜ್ಯದ ಗ್ರಾಮೀಣ ಜನರ ಗಮನಕ್ಕೆ : ʻಪಂಚಮಿತ್ರ ವಾಟ್ಸಪ್‌ ಚಾಟ್‌ʼ ನಲ್ಲಿ ಸಿಗಲಿವೆ ಈ...

ರಾಜ್ಯದ ಗ್ರಾಮೀಣ ಜನರ ಗಮನಕ್ಕೆ : ʻಪಂಚಮಿತ್ರ ವಾಟ್ಸಪ್‌ ಚಾಟ್‌ʼ ನಲ್ಲಿ ಸಿಗಲಿವೆ ಈ ಎಲ್ಲಾ ಸೇವೆಗಳು

ಬೆಂಗಳೂರು : ಪಂಚಮಿತ್ರವು ಕರ್ನಾಟಕ ಗ್ರಾಮ ಪಂಚಾಯತಿಗಳ ಮುಖಪುಟವಾಗಿದ್ದು, ಸಾರ್ವಜನಿಕರ ಮಾಹಿತಿಯ ವೇದಿಕೆಯಾಗಿದೆ. ಯಾವುದೇ ಗ್ರಾಮ ಪಂಚಾಯಿತಿಯ ಚುನಾಯಿತ ಸದಸ್ಯರ, ಪಂಚಾಯಿತಿ ಸಿಬ್ಬಂದಿಗಳ, ಗ್ರಾಮ ಪಂಚಾಯಿತಿಯ ಸಭಾ ನಡುವಳಿಗಳು, ಮುಂಬರುವ ಸಭೆಗಳ ದಿನಾಂಕ ಮತ್ತು ಅದರಲ್ಲಿ ಚರ್ಚಿಸುವ ವಿಷಯಗಳು, ಗ್ರಾಮ ಪಂಚಾಯಿತಿಯ ಆದಾಯ, ಇತ್ಯಾದಿ ಮಾಹಿತಿಯನ್ನು ಸಾರ್ವಜನಿಕರು ತಿಳಿಯಬಹುದು.

ವಾಟ್ಸಾಪ್‌ ಚಾಟ್‌ ಆರಂಭಿಸಲಾಗಿದ್ದು, 8277506000 ಸಂಖ್ಯೆಗೆ ವಾಟ್ಸಾಪ್‌ ಸಂದೇಶ ಕಳುಹಿಸಿದರೆ ಅಧಿಕೃತ ವಾಟ್ಸಾಪ್‌ ಚಾಟ್‌ ಆರಂಭಗೊಳ್ಳುತ್ತದೆ. ನಂತರ ಭಾಷೆ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿ. ಅಗತ್ಯವಿರುವ ಮಾಹಿತಿ ತಿಳಿಯಬಹುದು.

ಪಂಚಮಿತ್ರ ವಾಟ್ಸಪ್‌ ಚಾಟ್‌ ನಲ್ಲಿ ಸಿಗಲಿವೆ  ಈ ಎಲ್ಲಾ ಸೇವೆಗಳು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಟ್ಟಡ ನಿರ್ಮಾಣ ಪರವಾನಗಿ

ಹೊಸ ನೀರು ಸರಬರಾಜು ಸಂಪರ್ಕ

ನಿರಾಕ್ಷೇಪಣಾ ಪತ್ರ

 ನೀರು ಸರಬರಾಜಿನ ಸಂಪರ್ಕ ಕಡಿತ

ಕುಡಿಯುವ ನೀರಿನ ನಿರ್ವಹಣೆ

ನರೇಗಾ ಅಡಿ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆ

ಬೀದಿ ದೀಪದ ನಿರ್ವಹಣೆ

ಗ್ರಾಮ ನೈರ್ಮಲ್ಯ ನಿರ್ವಹಣೆ

ವ್ಯಾಪಾರ ಪರವಾನಗಿ

ಸ್ವಾಧೀನ ಪ್ರಮಾಣ ಪತ್ರ

ರಸ್ತೆ ಅಗೆಯುವುದಕ್ಕಾಗಿ ಅನುಮತಿ

ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು

ಕೈಗಾರಿಕೆ, ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ

ಹೊಸ/ಅಸ್ತಿತ್ವದಲ್ಲಿರುವ ದೂರಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ,

 ಹೊಸ/ಅಸ್ತಿತ್ವದಲ್ಲಿರುವ ಓವರ್ ಗೌಂಡ್‌ಕೇಬಲ್ ಕೇಬಲ್ ಮೂಲ

ಮೂಲಸೌಕರ್ಯ/ಭೂಗತ ಸೌಕರ್ಯಕ್ಕಾಗಿ ಅನುಮತಿ,ನಿಯಮಿತಗೊಳಿಸುವಿಕೆ

 

For Latest News Updates, Join Our Whatsapp Community🚩
RELATED ARTICLES

Most Popular