ಯಶಸ್ಸು ಪ್ರಾಪ್ತಿಗಾಗಿ ವಾರಕ್ಕನುಗುಣವಾಗಿ ಪರ್ಸ್ ನಲ್ಲಿರಲಿ ಈ ಬಣ್ಣದ ಹೂ

ಹಿಂದೂ ಧರ್ಮದಲ್ಲಿ ಹೂವುಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಹೂವುಗಳನ್ನು ದೇವರ ಪೂಜೆಗೆ, ಮಂಗಳ ಕಾರ್ಯಕ್ಕೆ ವಿಶೇಷವಾಗಿ ಬಳಸಲಾಗುತ್ತದೆ. ವಾಸ್ತು ಪ್ರಕಾರ ನಕಾರಾತ್ಮಕ ಶಕ್ತಿಯು ಹೂವುಗಳಿಂದ ಕಡಿಮೆಯಾಗುತ್ತದೆ, ಧನಾತ್ಮಕ ಶಕ್ತಿಯು ಹೆಚ್ಚಾಗುತ್ತದೆ. ಕೆಲಸಕ್ಕೆ ಹೋಗುವವರು ವಾರಕ್ಕನುಗುಣವಾಗಿ  ಜೇಬಿನಲ್ಲಿ ವಿಶೇಷ ಹೂವನ್ನು ಇಟ್ಟುಕೊಳ್ಳಬೇಕು. ಇದ್ರಿಂದ ಯಶಸ್ಸು ಪ್ರಾಪ್ತಿಯಾಗುತ್ತದೆ.

ಭಾನುವಾರ ಸೂರ್ಯದೇವನಿಗೆ ಸಮರ್ಪಿಸಲಾಗಿದೆ. ಈ ಕಾರಣಕ್ಕಾಗಿ ಪರ್ಸ್ ನಲ್ಲಿ ಮಂದಾರ ಹೂವನ್ನು ಇಡಬೇಕು. ಸೋಮವಾರ ಚಂದ್ರನಿಗೆ ಸಮರ್ಪಿಸಲಾಗಿದೆ. ಈ ದಿನ ಲ್ಯಾವೆಂಡರ್ ಹೂಗಳನ್ನು ಜೇಬಿನಲ್ಲಿ ಇರಿಸಿ.

ಮಂಗಳವಾರ ಮಂಗಳ ಗ್ರಹದ ದಿನ. ಈ ದಿನ  ಕೆಂಪು ಹೂವುಗಳನ್ನು ಜೇಬಿನಲ್ಲಿ ಇರಿಸಿಕೊಳ್ಳಬೇಕು. ಬುಧವಾರ ಬುಧ ಗ್ರಹದ ದಿನ. ಈ ದಿನ ಲಿಲ್ಲಿ  ಹೂಗಳನ್ನು ಜೇಬಿನಲ್ಲಿ ಇಡಬೇಕು. ಗುರುವಾರದ ದಿನವನ್ನು ಗುರುಗೆ ಅರ್ಪಿಸಲಾಗಿದೆ. ಈ ದಿನ ಕಮಲದ ಹೂಗಳನ್ನು ಜೇಬಿನಲ್ಲಿ ಇಡಿ. ಶುಕ್ರವಾರ ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಈ ದಿನ ಜೇಬಿನಲ್ಲಿ ನೇರಳೆ ಬಣ್ಣದ ಹೂವುಗಳನ್ನು ಇರಿಸಿ. ಶನಿವಾರ ಶನಿ ಗ್ರಹಕ್ಕೆ ಅರ್ಪಿತ. ಗಾಢ ಬಣ್ಣದ ಹೂವುಗಳನ್ನು ನಿಮ್ಮ ಜೇಬಿನಲ್ಲಿ ಇರಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read