HomeKarnatakaಟಿ.ನರಸೀಪುರ: ಗಣೇಶ ಹಬ್ಬದ ಅಂಗವಾಗಿ ಶಾಂತಿ ಸಭೆ: ಖಡಕ್ ವಾರ್ನಿಂಗ್ ಕೊಟ್ಟ ಇನ್ಸ್ಪೆಕ್ಟರ್ ಧನಂಜಯ್

ಟಿ.ನರಸೀಪುರ: ಗಣೇಶ ಹಬ್ಬದ ಅಂಗವಾಗಿ ಶಾಂತಿ ಸಭೆ: ಖಡಕ್ ವಾರ್ನಿಂಗ್ ಕೊಟ್ಟ ಇನ್ಸ್ಪೆಕ್ಟರ್ ಧನಂಜಯ್

ಮೈಸೂರು: ಗೌರಿ-ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ಎಲ್ಲಡೆ ಸಿದ್ಧಗಳು ಆರಂಭವಾಗಿವೆ. ಹಬ್ಬದ ಸಂದರ್ಭದಲ್ಲಿ ಹಗೂ ಗನೇಶ ಮೂರ್ತಿ ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಕಹೆ ಕೂಡ ಕಟ್ಟೆಚ್ಚರ ವಹಿಸಿದೆ. ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಗಣೇಶ ಹಬ್ಬಕ್ಕೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇನ್ಸ್ ಪೆಕ್ಟರ್ ಧನಂಜಯ್ ಇಂದು ಶಾಂತಿ ಸಭೆ ನಡೆಸಿದರು.

ಮಸೀದಿ ರಸ್ತೆಗಳಲ್ಲಿ ಗಣೇಶ ಮೂರ್ತಿ ಮೆರವಣಿಗೆ ಮಾಡುವಂತಿಲ್ಲ. ಮಸೀದಿ ಮುಂದೆ ಹೋಗೋದು, ಅಲ್ಲೇ ಕುಣಿಯೋದು ಇವೆಲ್ಲವನ್ನು ಮಾಡಬೇಡಿ. ನಮ್ಮ ಹಬ್ಬವನ್ನು ನೋಡಿ ಬೇರೆ ಧರ್ಮದವರು ಗೌರವ ಕೊಡಬೇಖು, ಖುಷಿಪಡಬೇಕು ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಣೇಶ ವಿಸರ್ಜನೆ ಮಾಡುವಾಗ ಯಾವ ಕಾರಣಕ್ಕೂ ಮಸೀದಿ ರಸ್ತೆಗಳಲ್ಲಿ ಹೋಗಬಾರದು. ಬೇರೆ ರಸ್ತೆಗಳು ಇವೆ. ಗುಂಜಾ ನರಸಿಂಹಸ್ವಾಮಿ ದೇವಸ್ಥಾನದ ಬಳಿ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗಣೇಶ ವಿಸರ್ಜನೆ ಮಾಡ್ತಾರೆ. ಅಲ್ಲಿಗೆ ಹೋಗಲು ಬೇರೆ ಬೇರೆ ದಾರಿಗಳಿವೆ. ಮಸೀದಿ ರಸ್ತೆ ಮೂಲಕ ಹೋಗುವಂತಿಲ್ಲ. ನಾವು ಯಾವ ರಸ್ತೆಯಲ್ಲಿ ಹೋಗಲು ಸೂಚಿಸುತ್ತಿವೋ ಅದೇ ರಸ್ತೆಯಲ್ಲಿ ಹೋಗಬೇಕು ಎಂದು ಸೂಚಿಸಿದರು.

ಅದನ್ನು ಬಿಟ್ಟು ನಾವು ಹೀಗೇ ಹೋಗಬೇಕು, ಹಾಗೇ ಹೋಗಬೇಕು ಎನ್ನುವುದು. ಮಸೀದಿ ರಸ್ತೆಯಲ್ಲಿ ಹೋಗಿ ಮಸೀದಿ ಬಳಿ ಮೆರವಣಿಗೆ ನಿಲ್ಲಿಸಿ ಅಲ್ಲಿ ಪಟಾಕಿ ಹೊಡೆಯುವುದು, ಜೋರಾಗಿ ಕುಣಿಯುವುದು ಇಂತದ್ದನ್ನೆಲ್ಲ ಮಾಡಬಾರದು. ಈ ಬಾರಿ ಈ ರೀತಿ ಏನಾದರೂ ಮಾಡಿದರೆ ನಮ್ಮ ಗಮನಕ್ಕೆ ಬಂದರೆ ನಾವು ಸುಮ್ಮನೆ ಬಿಡಲ್ಲ. ಬಾಯಲ್ಲಿ ಹೇಳುವುದಿಲ್ಲ. ಮಾಡಿ ತೋರಿಸುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದರು.

ಬೇರೆಯವರು ನೋಡಿದರೆ ನಮ್ಮ ಹಬ್ಬ ನೋಡಿ ಖುಷಿ ಪಡಬೇಕು, ಗೌರವ ಕೊಡಬೇಕು. ಅವರ ಹಬ್ಬ ಅವರು ಮಾಡುತ್ತಿದ್ದಾರೆ. ಯಾವ ಧರ್ಮ ಆದರೆ ಏನು? ಅವರ ಧರ್ಮ ಅವರಿಗೆ ಹೆಚ್ಚು, ನಿಮ್ಮ ಧರ್ಮ ನಿಮಗೆ ಹೆಚ್ಚು. ಯಾವ ಧರ್ಮದಲ್ಲಿಯೂ ಅವರನ್ನು ನೋಡಿದ ತಕ್ಷಣ ಕುಣಿದು ಬಿಡು ಎಂದಿಲ್ಲ. ಯಾವ ಧರ್ಮದಲ್ಲೂ ಗಣಪತಿ ಹಬ್ಬ ಮಾಡುವಾಗ ಮಸೀದಿ ಮುಂದೆ ಹೋಗಿ ಕುಣಿಬೇಕು ಎಂದಿಲ್ಲ. ಹಾಗೆ ಮಾಡಬೇಕು ಎಂದು ಯಾರಾದರೂ ಹೇಳಿಕೊಟ್ಟಿದ್ದಾರಾ? ಕಿಡಿಗೇಡಿಗಳು ಮಾತ್ರ ಹಾಗೆ ಮಾಡುವುದು. ಈ ಬಾರಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂದು ತಿಳಿಸಿದರು.

ಇನ್ನು ಗಣಪತಿ ಕೂರಿಸುವವರು ಡಿಜೆ ಮಾದರಿಯ ಸ್ಪೀಕರ್ ಗಳನ್ನು ಬಳಸುವಂತಿಲ್ಲ. ಗಣೇಶ ಪ್ರತಿಷ್ಠಾಪನೆ ಜಾಗದಲ್ಲಿ ಎರಡು ಚಿಕ್ಕ ಸ್ಪೀಕರ್ ಗಳನ್ನು ಮಾತ್ರ ಅಳವಡಿಸಲು ಅವಕಾಶ ನೀಡಲಾಗುವುದು. ಕಳೆದ ಬಾರಿ ಡಿಜೆ ಸ್ಪೀಕರ್ ಹಾಕಿದ್ದಕ್ಕೆ ಸ್ಪೀಕರ್ ಗಳನ್ನು ಸೀಜ್ ಮಾಡಿ ದಂಡ ಕಟ್ಟಿಸಿಕೊಂಡಿದ್ದೆವು ಎಂದು ತಿಳಿಸಿದರು.

ಗಣೇಶ ಪ್ರತಿಷ್ಠಾನೆ ಮಾಡುವವರು ರಾತ್ರಿ ೧೦ಗಂಟೆ ನಂತರ ನಿಮ್ಮ ಮೈಕ್, ಸ್ಪೀಕರ್ ಆಫ್ ಮಾಡಬೇಕು. ಗಮನಕ್ಕೆ ಬಂದರೆ ಕ್ರಮ ಕೈಗೊಳ್ಳಲಾಗುವುದು. ಮುಖ್ಯವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯಬೇಕು. ಕೆಇಬಿ, ಅಗ್ನಿಶಾಮಕ ದಳ, ಪುರಸಭೆ/ ಗ್ರಾಮ ಪಂಚಾಯತ್, ಪೊಲೀಸ್ ಇಲಾಖೆಯ ಅನುಮತಿ ಒಂದೇ ಕಡೇ ಸಿಗುವಂತೆ ಮಾಡಲಾಗುತ್ತದೆ. ಗಣಪತಿ ಕೂರಿಸುವವರು ಅಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆದಿರಬೇಕು ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular