HomeIndiaಬಿಜೆಪಿಯವರು ಹಲ್ಲೆ ಮಾಡಿದ್ದಾರೆ ಎಂದು ಬ್ಯಾಂಡೇಜ್ ಹಾಕಿ ನಾಟಕ: ಬ್ಯಾಂಡೇಜ್ ಕಿತ್ತುಹಾಕುತ್ತಿದ್ದಂತೆ ನ್ಯೂಸ್ ಲೈವ್‌ನಲ್ಲೇ ಟಿಎಂಸಿ...

ಬಿಜೆಪಿಯವರು ಹಲ್ಲೆ ಮಾಡಿದ್ದಾರೆ ಎಂದು ಬ್ಯಾಂಡೇಜ್ ಹಾಕಿ ನಾಟಕ: ಬ್ಯಾಂಡೇಜ್ ಕಿತ್ತುಹಾಕುತ್ತಿದ್ದಂತೆ ನ್ಯೂಸ್ ಲೈವ್‌ನಲ್ಲೇ ಟಿಎಂಸಿ ಕಾರ್ಯಕರ್ತೆ ಬಣ್ಣ ಬಯಲು; ವಿಡಿಯೊ

ಮೊನ್ನೆ ( ಮೇ 4 ) ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಹೊರಬಿದ್ದಿವೆ. ಪಶ್ಚಿಮ ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿದೆ. ಬಿಜೆಪಿ ಬರೋಬ್ಬರಿ 207 ಸೀಟುಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಆಡಳಿತದಲ್ಲಿದ್ದ ಟಿಎಂಸಿ ಕೇವಲ 80 ಸೀಟುಗಳನ್ನು ಗೆದ್ದಿದೆ.

ಹೀಗೆ ಭಾರೀ ಹಿನ್ನಡೆ ಅನುಭವಿಸಿದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ತಮ್ಮ ವಿರುದ್ಧ ಮೋಸ ನಡೆದಿದೆ. ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅನ್ಯಾಯವಾಗಿದೆ, ತಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಆರೋಪಿಸಿದ್ದರು.

ಇನ್ನು ಮತ ಎಣಿಕೆ ದಿನದ ತಡ ರಾತ್ರಿಯಿಂದಲೇ ತಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ, ಮತಪೆಟ್ಟಿಗೆ ಇರಿಸಿದ್ದ ಸ್ಟ್ರಾಂಗ್ ರೂಮ್‌ಗಳ ಸಿಸಿಟಿವಿ ಆಫ್ ಮಾಡಿದ್ದಾರೆ ಎಂದೆಲ್ಲ ಆರೋಪ ಮಾಡಿ ಮಮತಾ ಬ್ಯಾನರ್ಜಿ ತಮ್ಮ ಕಾರ್ಯಕರ್ತರಿಗೆ ಎಚ್ಚರಿಕೆಯಿಂದ ಇರುವಂತೆ ಕರೆ ನೀಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ಪಶ್ಚಿಮ ಬಂಗಾಳದ ಫಲಿತಾಂಶ ಹೊರಬೀಳುತ್ತಿದ್ದಂತೆ ಹಲವೆಡೆ ಬಿಜೆಪಿ ಪಕ್ಷದ ಕಾರ್ಯಕರ್ತರು ಟಿಎಂಸಿ ಧ್ವಜವಿರುವ ಬ್ಯಾನರ್‌ಗಳನ್ನು ಸುಟ್ಟುಹಾಕಿದರು ಹಾಗೂ ವಾಹನಗಳನ್ನೂ ಸಹ ಹಾನಿ ಮಾಡಿದರು.

ಇದೇ ಸಮಯಕ್ಕೆ ಮಾಧ್ಯಮದ ಮುಂದೆ ಬಂದ ಮಹಿಳೆಯೊಬ್ಬರು ತಾನು ಟಿಎಂಸಿ ಪಕ್ಷದ ಕಾರ್ಯಕರ್ತೆ ಎಂದು ಹೇಳಿಕೊಂಡು ತನ್ನ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ, ತಲೆಗೆ ಪೆಟ್ಟಾಗಿದೆ ಎಂದು ಬ್ಯಾಂಡೇಜ್ ಧರಿಸಿ ಬಂದಿದ್ದರು.

ಹೀಗೆ ಮಹಿಳೆಯ ಆರೋಪ ಕೇಳುತ್ತಿದ್ದಂತೆ ಅಲ್ಲಿಯೇ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಏಕಾಏಕಿ ಆ ಮಹಿಳೆಯ ಬ್ಯಾಂಡೇಜ್ ಕಿತ್ತುಹಾಕಿದ್ದು, ಆಕೆಗೆ ಯಾವುದೇ ಪೆಟ್ಟಾಗಿಲ್ಲ ಎಂಬುದು ಕ್ಯಾಮೆರಾ ಮುಂದೆಯೇ ಬಹಿರಂಗವಾಯಿತು. ಈ ಮೂಲಕ ಆ ಮಹಿಳೆ ಹೇಳಿದ್ದೆಲ್ಲವೂ ಸುಳ್ಳು ಎಂಬುದು ಸ್ಪಷ್ಟವಾಯಿತು.

ಸದ್ಯ ಈ ಮಹಿಳೆ ನಿಜಕ್ಕೂ ಟಿಎಂಸಿ ಕಾರ್ಯಕರ್ತೆಯೇ? ಅಷ್ಟು ಜನರ ನಡುವೆ ನಕಲಿ ಬ್ಯಾಂಡೇಜ್ ಹಾಕಿಕೊಂಡು ಹೋದರೆ ಸಿಕ್ಕಿಬೀಳುವ ಸಣ್ಣ ಪರಿಜ್ಞಾನವೂ ಸಹ ಆಕೆಗೆ ಇರಲಿಲ್ಲವೇ ಎಂಬ ಪ್ರಶ್ನೆ ಎದ್ದಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular