ತಿರುಪತಿ: ತಿರುಪತಿ ತಿಮ್ಮಪ್ಪನ ದರ್ಶನವನ್ನು ಜೀವನದಲ್ಲಿ ಒಮ್ಮೆಯಾದರೂ ಪಡೆದು ಪುನೀತರಾಗಬೇಕು ಎಂದು ಕೋಟ್ಯಂತರ ಭಕ್ತರು ಕಾಯುತ್ತಿರುತ್ತಾರೆ. ಆದರೆ ಅದೆಷ್ಟೋ ಜನರಿಗೆ ಟಿಕೆಟ್ ಸಿಗದೇ ತಿಮ್ಮಪನ ದರ್ಶನ ಸಾಧ್ಯವಾಗದೇ ನಿರಾಶರಾಗುತ್ತಾರೆ. ಇದೀಗ ತಿಮ್ಮಪ್ಪನ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಸಿಹಿ ಸುದ್ದಿ ನೀಡಿದೆ. ಜುಲೈ ತಿಂಗಳ ತಿಮ್ಮಪ್ಪನ ದರ್ಶನಕ್ಕೆ ಈಗಲೇ ಟಿಕೆಟ್ ಕೋಟಾ ಬಿಡುಗಡೆ ಮಾಡಿದೆ.
ಹೌದು. 2026ರ ಜುಲೈ ತಿಂಗಳ ತಿರುಪತಿ ತಿಮ್ಮಪ್ಪ ದರ್ಶನ ಕೋಟಾವನ್ನು ಟಿಟಿಡಿ ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಭಕ್ತರು ತಕ್ಷಣ ಇಂದಿನಿಂದಲೇ ಟಿಕೆಟ್ ಬುಕ್ ಮಾಡಬಹುದಾಗಿದೆ.
ಜುಲೈ ತಿಂಗಳಲ್ಲಿ ತಿರುಪತಿ ವೆಂಕಟೇಶ್ವರನ ದರ್ಶನ ಪಡೆಯಲು ಸಮಯದ ಬಗ್ಗೆ ವಿಶೇಷ ಗಮನವಿರಲಿ. 300 ರೂ.ವಿಶೇಷ ಪ್ರವೇಶ ದರ್ಶನ ಇಂದು ಬೆಳಿಗ್ಗೆ 10:00 ಗಂಟೆಗೆ ಆನ್ಲೈನ್ ಕೋಟಾ ಬಿಡುಗಡೆಯಾಗಿದೆ. ಇದಲ್ಲದೇ ತಿರುಮಲ ಮತ್ತು ತಿರುಪತಿಯಲ್ಲಿನ ಕೊಠಡಿಗಳ ಬುಕ್ಕಿಂಗ್ ಇಂದು ಮಧ್ಯಾಹ್ನ 3:00 ಗಂಟೆಗೆ ಲಭ್ಯವಾಗಲಿದೆ.
ದರ್ಶನ ಟಿಕೆಟ್, ಅರ್ಜಿತ ಸೇವೆಗಳು ಅಥವಾ ವಸತಿ ಸೌಕರ್ಯದ ಹೆಸರಿನಲ್ಲಿ ಭಕ್ತರನ್ನು ವಂಚಿಸುವ ಜಾಲದ ಬಗ್ಗೆ ಟಿಟಿಡಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಯಾವುದೇ ಕಾರಣಕ್ಕೂ ಬ್ರೋಕರ್ ಅಥವಾ ಮಧ್ಯವರ್ತಿಗಳ ಮೂಲಕ ಟಿಕೆಟ್ ಪಡೆಯದಂತೆ ಸೂಚಿಸಿದೆ. ಟಿಟಿಡಿಯ ಅಧಿಕೃತ ವೆಬ್ಸೈಟ್ ಮೂಲಕವೇ ಬುಕ್ಕಿಂಗ್ ಮಾಡುವಂತೆ ತಿಳಿಸಿದೆ.
ಟಿಕೆಟ್ ಬುಕ್ ಮಾಡಲು ಈ ಕ್ರಮ ಅನುಸರಿಸಿ:
ಟಿಟಿಡಿಯ ಅಧಿಕೃತ ವೆಬ್ಸೈಟ್ ttdevasthanams.ap.gov.in ಗೆ ಭೇಟಿ ನೀಡಿ.
ನಿಮ್ಮ ಮೊಬೈಲ್ ಸಂಖ್ಯೆ ಮತ್ತು OTP ಬಳಸಿ ಲಾಗ್ ಇನ್ ಆಗಿ.
ಲಭ್ಯವಿರುವ ದಿನಾಂಕಗಳಲ್ಲಿ ಹಸಿರು ಬಣ್ಣದ ಸ್ಲಾಟ್ ಅನ್ನು ಆಯ್ಕೆ ಮಾಡಿ.
ಭಕ್ತರ ಆಧಾರ್ ಕಾರ್ಡ್ ವಿವರಗಳನ್ನು ಸರಿಯಾಗಿ ನಮೂದಿಸಿ.
ಆನ್ಲೈನ್ ಮೂಲಕ ಹಣ ಪಾವತಿಸಿ, ನಿಮ್ಮ ಟಿಕೆಟ್ ಅನ್ನು ಪ್ರಿಂಟ್ ಪಡೆದುಕೊಳ್ಳಿ.

