HomeLatest Newsಅವನಿಗೆ ಐಪಿಎಲ್ ಬಗ್ಗೆ ಏನೂ ಗೊತ್ತಿಲ್ಲ ಬೆಥೆಲ್ ತಲೆಕೆಡಿಸಿಕೊಳ್ಳಬೇಡ; ಅವಕಾಶ ಕೊಡದ ಆರ್‌ಸಿಬಿ ಬಿಟ್ಟು ಬಾ...

ಅವನಿಗೆ ಐಪಿಎಲ್ ಬಗ್ಗೆ ಏನೂ ಗೊತ್ತಿಲ್ಲ ಬೆಥೆಲ್ ತಲೆಕೆಡಿಸಿಕೊಳ್ಳಬೇಡ; ಅವಕಾಶ ಕೊಡದ ಆರ್‌ಸಿಬಿ ಬಿಟ್ಟು ಬಾ ಎಂದ ಇಂಗ್ಲೆಂಡ್ ಆಟಗಾರನಿಗೆ ಪೀಟರ್ಸನ್ ತಿರುಗೇಟು

ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಅರ್ಧ ಭಾಗ ಮುಕ್ತಾಯದ ಹಂತದಲ್ಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ( ಏಪ್ರಿಲ್ 24 ) ನಡೆಯಲಿರುವ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರುವ ಯೋಜನೆಯಲ್ಲಿದೆ.

ಟೂರ್ನಿಯಲ್ಲಿ ಗೆಲುವಿನ ಮೂಲಕ ಶುಭಾರಂಭ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಲ್ಲಿಯವರೆಗೂ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಉಳಿದೆರಡು ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದು, ಎಂಟು ಅಂಕಗಳನ್ನು ಸಂಪಾದಿಸಿ ಮೂರನೇ ಸ್ಥಾನದಲ್ಲಿದೆ.

ಇನ್ನು ಇತ್ತೀಚೆಗಿನ ಪಂದ್ಯಗಳಲ್ಲಿ ತಂಡದ ರೊಮಾರಿಯೊ ಶೆಫರ್ಡ್ ಕಳಪೆ ಪ್ರದರ್ಶನ ನೀಡಿದ್ದನ್ನು ಕಂಡ ತಂಡದ ಅಭಿಮಾನಿಗಳು ಇದು ಸ್ಟಾರ್ ಬಾಯ್ ಜೇಕಬ್ ಬೆಥೆಲ್‌ರನ್ನು ಕಣಕ್ಕಿಳಿಸುವ ಸಮಯ ಎಂದು ಸಾಮಾಜಿಕ ಜಾಲತಾಣದಲ್ಲಿ ಸಲಹೆಗಳನ್ನು ನೀಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೌದು, ಇಲ್ಲಿಯವರೆಗೂ ನಡೆದಿರುವ ಆರು ಪಂದ್ಯಗಳಲ್ಲಿ ಆರ್‌ಸಿಬಿ ಒಮ್ಮೆಯೂ ಜೇಕಬ್ ಬೆಥೆಲ್‌ಗೆ ಅವಕಾಶ ಕೊಟ್ಟಿಲ್ಲ. ಇದರ ಕುರಿತಾಗಿ ಮಾತನಾಡಿದ್ದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಅಲಸ್ಟೈರ್ ಕುಕ್ ಬೆಥೆಲ್ ಐಪಿಎಲ್‌ನಲ್ಲಿ ಏನನ್ನೂ ಮಾಡದೇ ಸುಮ್ಮನೆ ಕುಳಿತಿದ್ದಾನೆ, ಅದರ ಬದಲು ಇಂಗ್ಲೆಂಡ್‌ಗೆ ಬಂದು ಕೌಂಟಿ ಕ್ರಿಕೆಟ್ ಆಡಬಹುದು ಎಂದು ಹೇಳಿಕೆ ನೀಡಿದ್ದರು.

ಇದಕ್ಕೆ ಅದೇ ಇಂಗ್ಲೆಂಡ್‌ನ ಮತ್ತೋರ್ವ ಲೆಜೆಂಡರಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಪ್ರತಿಕ್ರಿಯಿಸಿದ್ದು, ‘ಅಲಸ್ಟೈರ್‌ಗೆ ಕುಕ್‌ಗೆ ಐಪಿಎಲ್‌ನಲ್ಲಿ ಆಡುವುದರ ಬಗ್ಗೆ ಸ್ವಲ್ಪವೂ ತಿಳುವಳಿಕೆ ಇಲ್ಲ. ವಿಶ್ವದ ಅತ್ಯುತ್ತಮ ಆಟಗಾರರ ಜತೆ ಆಟವಾಡುವುದರ ಕುರಿತು ಅರಿವಿಲ್ಲ. ಹಾಗಾಗಿ ಬೆಥೆಲ್ ಕುರಿತ ಆತನ ಅಭಿಪ್ರಾಯದ ಕುರಿತು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಬೆಥೆಲ್ ಭಾರತದಲ್ಲೇ ಇರು, ನೀನು ಆಟವಾಡದೇ ಇದ್ದರೂ ಕಲಿಯುತ್ತಿದ್ದೀಯ ಹಾಗೂ ಅದರಿಂದ ಒಳ್ಳೆಯ ಆಟಗಾರನಾಗುತ್ತೀಯ ಎಂಬುದು ನನಗೆ ಗೊತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular