BIG NEWS: ತಿರುಪತಿ ಲಡ್ಡು ಪ್ರಸಾದಕ್ಕೆ ಕಲಬೆರಿಕೆ ತುಪ್ಪ ಪೂರೈಕೆ; ಯಾರನ್ನೂ ಬಿಡುವುದಿಲ್ಲ: ಸಚಿವ ನಾರಾ ಲೋಕೇಶ್ ಆಕ್ರೋಶ

ತಿರುಪತಿ: ತಿರುಪತಿ ಲಡ್ಡುವಿನಲ್ಲಿ ಕಲಬೆರಿಕೆ ತುಪ್ಪ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುಪತಿ ಲಡ್ಡು ತಯಾರಿಕೆಗೆ ಕಲಬೆರಿಕೆ ತುಪ್ಪ ಪೂರೈಕೆ ಮಡಿರುವ ಯಾರನ್ನೂ ಬಿಡುವುದಿಲ್ಲ ಎಂದು ಸಚಿವ ನಾರಾ ಲೋಕೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಿರುಪತಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ವೈಸಿಪಿ ಆಡಳಿತದಲ್ಲಿ ಟಿಟಿಡಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿದೆ. ವೈಸಿಪಿ ಸರ್ಕಾರ ಭಕ್ತರನ್ನು ದೇವರಿಂದ ಸೂರ ಮಾಡಿದ್ದಾರೆ. ಅನ್ನದಾನ ಮತ್ತು ಲಡ್ಡು ಪ್ರಸಾದದ ಗುಣಮಟ್ಟ ಕಳಪೆಯಾಗಿದೆ. ಧರ್ಮಾರೆಡ್ಡಿ ಟಿಟಿಡಿಯಲ್ಲಿದ್ದಾ ಕಲಬೆರಿಕೆ ತುಪ್ಪ ಬಳಸಲಾಗಿದೆ ಎಂದು ಕಿಡಿಕರಿದ್ದಾರೆ.

ಭ್ರಷ್ಟಾಚಾರ ನಡೆಸಿದ್ದರಿಂದ ಭಕ್ತರ ಭಾವನೆಗೆ ಧಕ್ಕೆಯಾಗಿದೆ. ಟಿಟಿಡಿಯಲ್ಲಿ ಶುದ್ಧೀಕರಣ ಪ್ರಕ್ರಿಯೆ ಆರಂಭವಾಗಿದೆ. ಪಾವಿತ್ರತೆ ಮಾಡೋಣ. ಅಕ್ರಮವಾಗಿ ತುಪ್ಪ ಖರೀದಿಯಲ್ಲಿ ಪಡೆದ ಕಮಿಷನ್ ವದ್ಸೂಲಿ ಮಾಡುತ್ತೇವೆ. ಟಿಟಿಡಿಗೆ ಕಲಬೆರಿಕೆ ತುಪ್ಪ ಪೂರೈಸಿದ ಯಾರನ್ನೂ ಬಿಡುವ ಪ್ರಶ್ನೆ ಇಲ್ಲ ಎಂದು ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read