HomeIndiaತಿರುಮಲದ ಜಪಾಲಿ ಆಂಜನೇಯ ಸ್ವಾಮಿ ದೆಗುಲದ ತೀರ್ಥದ ನಲ್ಲಿಯಲ್ಲಿ ಹಾಲು ಬರುತ್ತಿರುವ ವದಂತಿ: ಸತ್ಯ ಬಯಲಿಗೆಳೆದ...

ತಿರುಮಲದ ಜಪಾಲಿ ಆಂಜನೇಯ ಸ್ವಾಮಿ ದೆಗುಲದ ತೀರ್ಥದ ನಲ್ಲಿಯಲ್ಲಿ ಹಾಲು ಬರುತ್ತಿರುವ ವದಂತಿ: ಸತ್ಯ ಬಯಲಿಗೆಳೆದ ಟಿಟಿಡಿ ಹೇಳಿದ್ದೇನು?

ತಿರುಪತಿ: ತಿರುಪತಿ-ತಿರುಮಲದ ಪ್ರಸಿದ್ಧ ಜಪಾಲಿ ಆಂಜನೇಯ ಸ್ವಾಮಿ ದೇವಾಅಲಯದ ತೀರ್ಥದ ಬಳಿ ಕುಡಿಯುವ ನೀರಿನ ನಲ್ಲಿಯಲ್ಲಿ ಹಾಲು ಬರುತ್ತಿದೆ ಎಂಬ ವದಂತಿ ಭಾರಿ ಸುದ್ದಿಯಾಗುತ್ತಿದೆ. ನಲ್ಲಿಯ ನೀರು ಸಂಪೂರ್ಣ ಬಿಳಿ ಬಣ್ಣಕ್ಕೆ ತಿರುಗಿದ್ದು, ಅಚ್ಚರಿಗೆ ಕಾರಣವಾಗಿದೆ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜಪಾಲಿ ತೀರ್ಥದಲ್ಲಿ ಹಾಲು ಬರುತ್ತಿದೆ ಎಂಬ ಸುದ್ದಿ ಹರಡಿದ್ದು, ಭಕ್ತರಲ್ಲಿ ಕುತೂಹಲ ಇಮ್ಮಡಿಗೊಳಿಸಿದೆ.

ಜಪಾಲಿ ತೀರ್ಥದ ನಲ್ಲಿಯಲ್ಲಿ ಹಾಲು ಬರುತ್ತಿರುವ ವದಂತಿ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದ್ದು, ಇದರ ಬೆನ್ನಲ್ಲೇ ತಿರುಮಲ ತಿರುಪತಿ ದೇವಸ್ಥಾನ (TTD) ಮಂಡಳಿಯು ವೈಜ್ಞಾನಿಕ ಪರೀಕ್ಷೆ ನಡೆಸಿ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಪಾಲಿ ತೀರ್ಥದಲ್ಲಿ ನಲ್ಲಿಗಳಿಂದ ನೀರು ಪೈಪ್ ಮುಖಾಂತರ ಅತ್ಯಂತ ವೇಗವಾಗಿ ಹೊರಬರುವಾಗ ನೀರಿನಲ್ಲಿ ಸೂಕ್ಷ್ಮ ಗಾಳಿಯ ಗುಳ್ಳೆಗಳು ಸೃಷ್ಟಿಯಾಗುತ್ತವೆ. ಇದರಿಂದಾಗಿ ನೀರು ತಾತ್ಕಾಲಿಕವಾಗಿ ಹಾಲಿನಂತೆ ಬಿಳಿಯಾಗಿ ಕಾಣಿಸುತ್ತದೆ. ನಲ್ಲಿಯಿಂದ ನೀರನ್ನು ಲೋಟಕ್ಕೋ ಅಥವಾ ಪಾತ್ರೆಗೋ ಹಿಡಿದಾಗ ಕೆಲವೇ ಸೆಕೆಂಡುಗಳಲ್ಲಿ ಆ ಗಾಳಿಯ ಗುಳ್ಳೆಗಳು ಒಡೆದುಹೋಗಿ, ನೀರು ತನ್ನ ಸಹಜ ಪಾರದರ್ಶಕ ರೂಪಕ್ಕೆ ಮರಳುತ್ತದೆ.

ಲ್ಯಾಬ್ ಗಳಲ್ಲಿ ನೀರಿನ ಮಾದರಿಯನ್ನು ತಪಾಸಣೆ ನಡೆಸಲಾಗಿದ್ದು, ನೀರು ಸಂಪೂರ್ಣವಾಗಿ ಶುದ್ಧವಾಗಿದೆ. ಇದರಲ್ಲಿ ಯಾವುದೇ ದುರ್ವಾಸನೆ, ಕೆಸರು ಅಥವಾ ಕಲ್ಮಶಗಳಿಲ್ಲ ಎಂದು ತಜ್ಞರು ದೃಢಪಡಿಸಿದ್ದಾರೆ ಎಂದು ತಿಳಿಸಿದೆ.

ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಾಳಿ ಬೆರೆತಾಗ ನೀರು ಬಿಳಿಯಾಗಿ ಕಾಣಿಸುವುದು ಒಂದು ಸಾಮಾನ್ಯ ಭೌತಿಕ ಪ್ರಕ್ರಿಯೆ. ಇದನ್ನು ಪೈಪ್‌ಲೈನ್ ವ್ಯವಸ್ಥೆಗಳಲ್ಲಿ ‘ಮೈಕ್ರೋ ಬಬಲ್ ಏರೇಶನ್’ ಎಂದು ಕರೆಯಲಾಗುತ್ತದೆ. ಮನೆಯಲ್ಲಿ ಫೋಮ್-ಎರೇಟರ್ ಹೊಂದಿರುವ ನಲ್ಲಿಗಳನ್ನು ಬಳಸುವಾಗಲೂ ನೀರು ಬಿಳಿಯಾಗಿ ಬರುವುದು ಇದೇ ಕಾರಣಕ್ಕೆ.

ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ಸುಳ್ಳು ಮಾಹಿತಿಯನ್ನು ನಂಬಬೇಡಿ. ಜಪಾಲಿ ತೀರ್ಥದ ನಲ್ಲಿಯಲ್ಲಿ ಬರುತ್ತಿರುವುದು ಶುದ್ಧವಾದ ನೀರು ಹೊರತು ಹಾಲಲ್ಲ ಎಂದು ಭಕ್ತರಲ್ಲಿ ಟಿಟಿಡಿ ಆರೋಗ್ಯ ಇಲಾಖೆ ಹಾಗೂ ಆಹಾರ ವಿಶ್ಲೇಷಣಾ ಪ್ರಯೋಗಾಲಯ ಮನವಿ ಮಾಡಿದೆ.

ತಿರುಮಲದ ದಟ್ಟಾರಣ್ಯ ಪ್ರದೇಶದಲ್ಲಿರುವ ಜಪಾಲಿ ಆಂಜನೇಯ ಸ್ವಾಮಿ ದೇವಾಲಯವು ಅತ್ಯಂತ ಪವಿತ್ರವಾದ ಯಾತ್ರಾ ಸ್ಥಳವಾಗಿದೆ. ಜಪಾಲಿ ಮಹರ್ಷಿಗಳು ಇಲ್ಲಿ ತಪಸ್ಸು ಮಾಡಿದ್ದರೆಂಬ ನಂಬಿಕೆಯಿದ್ದು, ಶ್ರೀರಾಮನನ್ನು ಪ್ರಸನ್ನಗೊಳಿಸಲು ಆಂಜನೇಯ ಸ್ವಾಮಿ ನೆಲೆಸಿದ ಸ್ಥಳ ಇದಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular