HomeLatest News'ನೇಕ್ಡ್ ಫ್ಲೈಯಿಂಗ್' ಎಂದರೇನು ? ಪ್ರಯಾಣಿಕರಿಗೇಕೆ ಇಷ್ಟೊಂದು ಕ್ರೇಜ್ ? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

‘ನೇಕ್ಡ್ ಫ್ಲೈಯಿಂಗ್’ ಎಂದರೇನು ? ಪ್ರಯಾಣಿಕರಿಗೇಕೆ ಇಷ್ಟೊಂದು ಕ್ರೇಜ್ ? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಪ್ರವಾಸವು ನಮ್ಮ ಮನಸ್ಸು ಮತ್ತು ದೇಹಕ್ಕೆ ಚೈತನ್ಯ ತುಂಬುವ, ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡುವ ಅತ್ಯುತ್ತಮ ಮಾರ್ಗ. ಆದರೆ, ಅನೇಕರಿಗೆ ಪ್ರವಾಸ ಎಂದರೆ ಬಟ್ಟೆಗಳನ್ನು ಪ್ಯಾಕ್ ಮಾಡುವುದರಿಂದ ಹಿಡಿದು ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವವರೆಗೆ ಸಾಕಷ್ಟು ಒತ್ತಡ ಮತ್ತು ತೊಂದರೆಗಳನ್ನು ಎದುರಿಸುವ ಪ್ರಕ್ರಿಯೆ ಎಂದೇ ಅನಿಸುತ್ತದೆ. ಇಂತಹ ಎಲ್ಲ ಕಿರಿಕಿರಿಗಳಿಂದ ಮುಕ್ತವಾಗಲು ಇತ್ತೀಚೆಗೆ ‘ನೇಕ್ಡ್ ಫ್ಲೈಯಿಂಗ್’ ಎಂಬ ಹೊಸ ಪ್ರವೃತ್ತಿ ವಿಶ್ವದಾದ್ಯಂತ ಜನಪ್ರಿಯವಾಗುತ್ತಿದೆ. ಹೆಸರನ್ನು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ಮೂಡುವ ಆಲೋಚನೆಗಿಂತ ಇದು ಸಂಪೂರ್ಣ ಭಿನ್ನವಾಗಿದೆ ! ಇಲ್ಲಿ ಬಟ್ಟೆ ಇಲ್ಲದೆ ಪ್ರಯಾಣಿಸುವುದು ಎಂದರ್ಥವಲ್ಲ, ಬದಲಿಗೆ ಲಗೇಜ್ ಇಲ್ಲದೆ ತಿರುಗಾಟ ನಡೆಸುವುದಾಗಿದೆ.

‘ನೇಕ್ಡ್ ಫ್ಲೈಯಿಂಗ್’ ಅಂದರೆ ಏನು?

‘ನೇಕ್ಡ್ ಫ್ಲೈಯಿಂಗ್’ ಎಂದರೆ ಯಾವುದೇ ಭಾರವಾದ ಸಾಮಾನು ಸರಂಜಾಮುಗಳಿಲ್ಲದೆ, ಅತ್ಯಂತ ಹಗುರವಾಗಿ ಪ್ರಯಾಣಿಸುವುದು. ಕೇವಲ ನಿಮ್ಮ ಜೇಬಿನಲ್ಲಿ ಅಥವಾ ಸಣ್ಣ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಬಹುದಾದ ಮೊಬೈಲ್, ಚಾರ್ಜರ್, ವ್ಯಾಲೆಟ್‌ನಂತಹ ಅಗತ್ಯ ವಸ್ತುಗಳೊಂದಿಗೆ ಪ್ರವಾಸ ಮಾಡುವುದು. ಇದು ಪ್ರಯಾಣಿಕರಿಗೆ ಸಮಯ ಮತ್ತು ಹಣ ಎರಡನ್ನೂ ಉಳಿಸಲು ಸಹಕಾರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಮಾನ್ಯವಾಗಿ, ಅನೇಕರಿಗೆ ಎಲ್ಲಿಗೇ ಹೋದರೂ ಭಾರವಾದ ಲಗೇಜ್ ಪ್ಯಾಕ್ ಮಾಡುವ ಅಭ್ಯಾಸವಿರುತ್ತದೆ. ಇದರಿಂದ ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ‘ನೇಕ್ಡ್ ಫ್ಲೈಯಿಂಗ್’ ಮೂಲಕ ಪ್ರಯಾಣಿಕರು ತಮ್ಮ ಸಮಯವನ್ನು ಉಳಿಸಿಕೊಳ್ಳಬಹುದು. ಏಕೆಂದರೆ, ಲಗೇಜ್ ಇಲ್ಲದಿದ್ದಾಗ ಚೆಕ್-ಇನ್‌ನಲ್ಲಿ ಸಮಯ ವ್ಯರ್ಥವಾಗುವುದಿಲ್ಲ, ಅಲ್ಲದೆ ಲಗೇಜ್ ಕಳೆದುಹೋಗುವ ಭಯವೂ ಇರುವುದಿಲ್ಲ.

ಲಗೇಜ್ ಇಲ್ಲದೆ ಹೇಗೆ ಪ್ರಯಾಣಿಸುವುದು?

ಹಾಗಾದರೆ, ಹೆಚ್ಚು ಬಟ್ಟೆ ಮತ್ತಿತ್ತರ ವಸ್ತುಗಳಿಲ್ಲದೆ ಹೇಗೆ ಪ್ರಯಾಣಿಸುವುದು ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ಈ ಪ್ರವೃತ್ತಿಯನ್ನು ಅನುಸರಿಸುವವರು ಕಡಿಮೆ ಸಾಮಾನುಗಳೊಂದಿಗೆ ಪ್ರಯಾಣಿಸಬಲ್ಲವರು. ಇದರ ಮುಖ್ಯ ಉದ್ದೇಶ ಆರಾಮದಾಯಕ ಮತ್ತು ಮುಕ್ತ ಹರಿವಿನ ಪ್ರಯಾಣವನ್ನು ಉತ್ತೇಜಿಸುವುದೇ ಆಗಿದೆ. ಈ ರೀತಿಯ ಪ್ರಯಾಣ ಮಾಡಲು ಕೆಲವು ವಿಶೇಷ ವಿಷಯಗಳ ಬಗ್ಗೆ ಗಮನ ಹರಿಸಬೇಕು:

ಸ್ಮಾರ್ಟ್ ಪ್ಯಾಕಿಂಗ್ ವಿಧಾನ

  • ಬ್ಯಾಕ್‌ಪ್ಯಾಕ್‌ನಲ್ಲಿ ಹೊಂದಿಕೊಳ್ಳುವಂತಹ ಬಟ್ಟೆಗಳನ್ನು ಮಾತ್ರ ಪ್ಯಾಕ್ ಮಾಡಿ.
  • ಅಗತ್ಯವಿರುವಷ್ಟು ಮಾತ್ರ ಟಾಯ್ಲೆಟರಿಗಳನ್ನು ಇಟ್ಟುಕೊಳ್ಳಿ.
  • ಮೊಬೈಲ್, ಪವರ್ ಬ್ಯಾಂಕ್ ಮತ್ತು ಹೆಡ್‌ಫೋನ್‌ಗಳಂತಹ ಕನಿಷ್ಠ ತಂತ್ರಜ್ಞಾನದ ವಸ್ತುಗಳನ್ನು ಮಾತ್ರ ಕೊಂಡೊಯ್ಯಿರಿ. ಲ್ಯಾಪ್‌ಟಾಪ್ ಅಥವಾ ಕ್ಯಾಮೆರಾವನ್ನು ತಪ್ಪಿಸಿ.
  • ಡಿಜಿಟಲ್ ಬೋರ್ಡಿಂಗ್ ಪಾಸ್ ಮತ್ತು ಇ-ದಾಖಲೆಗಳನ್ನು ನಿಮ್ಮ ಫೋನ್‌ನಲ್ಲಿ ಇಟ್ಟುಕೊಳ್ಳಿ. ಇದು ಹಾರ್ಡ್ ಕಾಪಿಗಳನ್ನು ಇಟ್ಟುಕೊಳ್ಳುವ ಅಗತ್ಯವನ್ನು ತಪ್ಪಿಸುತ್ತದೆ.
  • ಪಾಸ್‌ಪೋರ್ಟ್, ವೀಸಾ ಮತ್ತು ವಿಮಾನ ಟಿಕೆಟ್‌ನ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಮೊಬೈಲ್‌ನಲ್ಲಿ ಉಳಿಸಿ.

ಇದರ ಪ್ರಯೋಜನಗಳೇನು?

  • ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಸುಲಭವಾಗುತ್ತದೆ.
  • ಭಾರವಾದ ಲಗೇಜ್‌ಗೆ ಹೆಚ್ಚುವರಿ ಶುಲ್ಕ ಪಡಿಸಬೇಕಾಗಿಲ್ಲ.
  • ವಿಮಾನ ತಪ್ಪಿಸಿಕೊಳ್ಳುವ ಆತಂಕ ಕಡಿಮೆಯಾಗುತ್ತದೆ.
  • ಹೋಟೆಲ್‌ನಲ್ಲಿ ಅಥವಾ ಪ್ರಯಾಣಿಸುವಾಗ ಲಗೇಜ್ ಕಳ್ಳತನವಾಗುವ ಭಯವಿರುವುದಿಲ್ಲ.
  • ನೀವು ಆರಾಮ ಮತ್ತು ಸ್ವಾತಂತ್ರ್ಯದಿಂದ ಪ್ರಯಾಣಿಸಬಹುದು.

For Latest News Updates, Join Our Whatsapp Community🚩
RELATED ARTICLES

Most Popular