ಕೊಡಗು: ಇತ್ತೀಚಿನ ದಿನಗಳಲ್ಲಿ ಕೆಲ ಪೊಲೀಸ್ ಸಿಬ್ಬಂದಿಗಲೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದರ ಬೆನ್ನಲ್ಲೇ ಇದೀಗ ಅರಣ್ಯ ಇಲಾಖೆ ಸಿಬ್ಬಂದಿಯೇ ಮರಗಳ್ಳತನ ಮಾಡಿರುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಎಡವಾರೆ ಮೀಸಲು ಅರಣ್ಯದಲ್ಲಿ 27 ತೇಗದ ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಯೇ ಕಳ್ಲತನ ಮಾಡಿರುವುದು ಪತ್ತೆಯಾಗಿದೆ. ಆರ್.ಆರ್.ಟಿ ಸಿಬ್ಬಂದಿ ವಿನೋದ್ ಎಂಬಾತನಿಂದ ಈ ಕೃತ ನಡೆದಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ವೇಳೆ ಕತ್ತರಿಸಿದ್ದ ಮರಗಳನ್ನು ಲೋಡ್ ಮಾಡುತ್ತಿದ್ದ ವೇಳೆ ಲೋಡರ್ ಸಂತೋಷ್ ನನ್ನು ಬಂಧಿಸಲಾಗಿದೆ. ಸೋಮವಾರಪೇಟೆ ತಾಲೂಕಿನ ಕಾಜೂರು ಬಳಿ ಕತ್ತರಿಸಿದ್ದ 7 ತೇಗದ ಮರ, 1 ಪಿಕಪ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಈ ವೇಳೆ ನಾಲ್ವರು ಎಸ್ಕೇಪ್ ಆಗಿದ್ದಾರೆ. ಬಂಧಿತನ ವಿಚಾರಣೆ ವೇಳೆ ಮರಗಳ್ಳತನಕ್ಕೆ ಆರ್.ಆರ್.ಟಿ ಸಿಬ್ಬಂದಿ ವಿನೋದ್ ಸಾಥ್ ನೀಡುತ್ತಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಅಲ್ಲದೇ ಅರಣ್ಯ ವ್ಯಾಪ್ತಿಯಲ್ಲಿ ಬೈಕ್ ನಲ್ಲಿ ಓಡಾಡಿ ಮರಗಳ ಬಗ್ಗೆ ವಿನೋದ್ ಮಾಹಿತಿ ನೀಡುತ್ತಿದ್ದನಂತೆ. ಈ ಹಿನ್ನೆಲೆಯಲ್ಲಿ ವಿನೋದ್ ಸೇರಿ 6 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮರಗಳುವು ನಡೆಸುತ್ತಿದ್ದ ಗ್ಯಾಂಗ್ ಬಂಧನಕ್ಕಾಗಿ ಬಲೆ ಬೀಸಲಾಗಿದೆ.

