HomeLive NewsBIG NEWS: ಹುಲಿ ಸಂರಕ್ಷಿತಾರಣ್ಯದ ಬಳಿ ಹುಲಿ ದಾಳಿ: ಮಹಿಳೆ ಸಾವು

BIG NEWS: ಹುಲಿ ಸಂರಕ್ಷಿತಾರಣ್ಯದ ಬಳಿ ಹುಲಿ ದಾಳಿ: ಮಹಿಳೆ ಸಾವು

ಭೋಪಾಲ್: ಬಾಂಧವ್ ಗರ್ ಹುಲಿ ಸಂರಕ್ಷಿತಾರಣ್ಯದ ಬಳಿ ಹುಲಿ ದಾಳಿಗೆ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಉಮರಿಯಾ ಜಿಲ್ಲೆಯಲ್ಲಿ ನಡೆದಿದೆ.

ಮಾನ್ಪುರ್ ಅರಣ್ಯವಲಯದ ಬಫರ್ ಜೋನ್ ರಾಖಿ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. 44 ವರ್ಷದ ಗುಲ್ಲಿ ಬಾಯಿ ಎಂಬ ಮಹಿಳೆ ಹುಲಿ ದಾಳಿಗೆ ಬಲಿಯಾಗಿದ್ದಾರೆ.

ಮಹಿಳೆ ಗುಲ್ಲಿ ಬಾಯಿ ಇಂದು ಬೆಳಿಗ್ಗೆ ಕೆಲಸದ ಕಾರಣಕ್ಕೆ ತೆರಳುತ್ತಿದ್ದಾಗ ಏಕಾಏಕಿ ಹುಲಿ ದಾಳಿ ನಡೆಸಿದೆ. ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹುಲಿ ಮೃತದೇಹವನ್ನು ಎಳೆದೊಯ್ಯುತ್ತಿದ್ದ ವೇಳೆ ಜನರ ಕೂಗಾಟ, ಚೀರಾಟ ಕೇಳಿ ಕಾಲುವೆ ಬಳಿ ಮೃತದೇಹ ಬಿಟ್ಟು ಪರಾರುಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಹಿಳೆಯ ಕುಟುಂಬಕ್ಕೆ ಅಂತ್ಯಸಂಸ್ಕಾರ ನಡೆಸಲು 10 ಸಾವಿರ ರೂಪಾಯಿ ನಿಡಲಾಗಿದೆ. ಪರಿಹಾರದ ಬಗ್ಗೆ ಬಳಿಕ ನಿರ್ಧರಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular