ಬೆಂಗಳೂರು: ಸಿಗರೇಟ್ ಹಣ ಕೇಳಿದ್ದಕ್ಕೆ ಅಂಗಡಿ ಮಾಲೀಕ, ಗ್ರಾಹಕನ ಮೇಲೆ ಹಲ್ಲೆ ನಡೆಸಲಾಗಿದೆ. ಕುಡಿದ ಮತ್ತಿನಲ್ಲಿ ಇಬ್ಬರು ಪುಂಡರು ಹಲ್ಲೆ ಮಾಡಿದ್ದಾರೆ.
ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದೆ. ರಾತ್ರಿ 9.30 ರ ಸುಮಾರಿಗೆ ಗ್ಯಾಲಕ್ಸಿ ಕಾಂಟಿಮೆಂಟ್ಸ್ ಬಳಿ ಬಂದಿದ್ದ ಮಂಜೇಶ್ ಅಲಿಯಾಸ್ ಬೆಣ್ಣೆ ಮತ್ತು ಸ್ನೇಹಿತ ಕಾಂಡಿಮೆಂಟ್ಸ್ ಮಾಲೀಕನ ಬಳಿ ಸಿಗರೇಟ್ ಕೇಳಿದ್ದಾರೆ.
ಆದರೆ ಹಣ ಕೊಡದೆ ಅವಾಜ್ ಹಾಕಿದ್ದಾರೆ. ಈ ವೇಳೆ ಬಂದ ಗ್ರಾಹಕ ಬೆಣ್ಣೆಯ ಸ್ನೇಹಿತನನ್ನು ನೋಡಿದ್ದರು. ಇಷ್ಟಕ್ಕೆ ಗುರಾಯಿಸುತ್ತೀಯಾ ಎಂದು ಗ್ರಾಹಕನ ಮೇಲೆ ಹಲ್ಲೆ ಮಾಡಲಾಗಿದೆ. ರಸ್ತೆಯಲ್ಲಿ ಎಳೆದಾಡಿ ಪುಂಡರು ಹಲ್ಲೆ ನಡೆಸಿದ್ದಾರೆ. ನಂತರ ಕಾಂಡಿಮೆಂಟ್ಸ್ ಮಾಲೀಕ ರಾಜು ಮೇಲೆ ಹಲ್ಲೆ ಮಾಡಲಾಗಿದೆ.
ಸಿಗರೇಟ್ ಗೆ ಹಣ ಕೇಳುತ್ತೀಯಾ ಎಂದು ರಾಜು ಮೇಲೆ ಹಲ್ಲೆ ನಡೆಸಿ ಅಂಗಡಿಯನ್ನು ಧ್ವಂಸ ಮಾಡಿದ್ದಾರೆ. ಡ್ರ್ಯಾಗರ್ ತೆಗೆದು ಬೆದರಿಸಿ ಅಂಗಡಿಗೆ ನುಗ್ಗಿ ದಾಂದಲೆ ಮಾಡಿದ್ದಾರೆ. ಕಾಂಡಿಮೆಂಟ್ಸ್ ಅಂಗಡಿ ವಸ್ತುಗಳನ್ನು ಹಾಳುಗೆಡವಿದ್ದಾರೆ. ಘಟನೆ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

