HomeIndiaವಿದ್ಯುತ್ ತಗುಲಿ ತಮಿಳುನಾಡಿನಲ್ಲಿ ಮೂರು ಆನೆಗಳ ಸಾವು

ವಿದ್ಯುತ್ ತಗುಲಿ ತಮಿಳುನಾಡಿನಲ್ಲಿ ಮೂರು ಆನೆಗಳ ಸಾವು

ಕಾಡು ಪ್ರಾಣಿಗಳಿಂದ ತನ್ನ ಬೆಳೆಯನ್ನು ರಕ್ಷಿಸುವ ಸಲುವಾಗಿ ರೈತನೊಬ್ಬ ಅಕ್ರಮವಾಗಿ ವಿದ್ಯುತ್ ಬೇಲಿಯನ್ನು ಹಾಕಿದ್ದು, ಇದನ್ನು ದಾಟುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶವಾಗಿ ಮೂರು ಆನೆಗಳು ಸತ್ತಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಕಾಳಿ ಕೌಂಡರ್ ಕೊಟ್ಟೈ ಗ್ರಾಮದಲ್ಲಿ ಮಂಗಳವಾರದಂದು ಈ ಘಟನೆ ನಡೆದಿದ್ದು, ಮೂರು ಆನೆಗಳು ಮೃತಪಟ್ಟಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದ ಕಾರಣ ರೈತ ತನ್ನ ಜಮೀನಿಗೆ ಅಕ್ರಮವಾಗಿ ವಿದ್ಯುತ್ ಬೇಲಿ ಹಾಕಿದ್ದ. ಇದು ಸ್ಪರ್ಶವಾದ ಕಾರಣ ಈ ಘಟನೆ ನಡೆದಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular