HomeLatest NewsBREAKING : ಮಹಾರಾಷ್ಟ್ರದಲ್ಲಿ ಘೋರ ದುರಂತ ; ಕಟ್ಟಡ ಕುಸಿದು 7 ಮಂದಿ ಸಾವು |WATCH...

BREAKING : ಮಹಾರಾಷ್ಟ್ರದಲ್ಲಿ ಘೋರ ದುರಂತ ; ಕಟ್ಟಡ ಕುಸಿದು 7 ಮಂದಿ ಸಾವು |WATCH VIDEO

ಮಹಾರಾಷ್ಟ್ರದ ಭಿವಂಡಿಯಲ್ಲಿ ಗುರುವಾರ ರಾತ್ರಿ ನಾಲ್ಕು ಮಹಡಿ ಕಟ್ಟಡದ ಒಂದು ಭಾಗ ಕುಸಿದು ಬಿದ್ದ ಪರಿಣಾಮ 7 ಮಂದಿ ಮೃತಪಟ್ಟಿದ್ದು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಹಾಗೂ ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕಟ್ಟಡದಲ್ಲಿ ಕಾಮಗಾರಿ ನಡೆಯುತ್ತಿದ್ದ ವೇಳೆ ಅದರ ಪ್ರಮುಖ ಭಾಗ ಏಕಾಏಕಿ ಕುಸಿದಿದೆ. ಕಟ್ಟಡದ ದುರ್ಬಲ ಸ್ಥಿತಿ ಮತ್ತು ಸುರಕ್ಷತಾ ಕಾರಣಗಳಿಂದ ಅದನ್ನು ಈ ಹಿಂದೆಯೇ ಖಾಲಿ ಮಾಡಿಸಲಾಗಿತ್ತು. ಆದರೆ, ಘಟನೆಯ ವೇಳೆ 4 ರಿಂದ 5 ಕಾರ್ಮಿಕರು ಒಳಗಿದ್ದ ಕಾರಣ ಅವರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಡಿಆರ್‌ಎಫ್ ತಂಡ ಇದುವರೆಗೆ ಒಬ್ಬ ಮಹಿಳೆಯನ್ನು ಅವಶೇಷಗಳಡಿಯಿಂದ ಜೀವಂತವಾಗಿ ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದೆ. ಇನ್ನೂ ಸಿಲುಕಿರುವವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅವಶೇಷಗಳಡಿ ಇನ್ನೂ ಹೆಚ್ಚಿನ ಜನರು ಸಿಲುಕಿರುವ ಸಾಧ್ಯತೆ ಇರುವುದರಿಂದ ರಕ್ಷಣಾ ಕಾರ್ಯಾಚರಣೆಯನ್ನು ಅಧಿಕಾರಿಗಳು ವೇಗಗೊಳಿಸಿದ್ದಾರೆ.ಕುಸಿದ ಕಟ್ಟಡವನ್ನು ಕೋಹಿನೂರ್ ಅಪಾರ್ಟ್‌ಮೆಂಟ್ ಎಂದು ಗುರುತಿಸಲಾಗಿದ್ದು, ಈ ಕಟ್ಟಡವನ್ನು ಈಗಾಗಲೇ ನಗರ ಪಾಲಿಕೆ ಅಪಾಯಕಾರಿಯಾಗಿದೆ ಎಂದು ಘೋಷಿಸಿತ್ತು ಎಂದು ವರದಿಯಾಗಿದೆ.

ಈ ಕುರಿತು ಭಿವಂಡಿ ಮಹಾಪೌರ ನರಾಯಣ್ ಚೌಧರಿ ಪ್ರತಿಕ್ರಿಯಿಸಿ, “ಭಿವಂಡಿಯಲ್ಲಿ ಅಪಾಯಕಾರಿಯೆಂದು ಗುರುತಿಸಲಾದ ಇಂತಹ ಅನೇಕ ಕಟ್ಟಡಗಳಿವೆ. ಸಿಲುಕಿರುವವರನ್ನು ರಕ್ಷಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಅಪಾಯಕಾರಿಯಾದ ಕಟ್ಟಡಗಳಲ್ಲಿ ವಾಸಿಸುವವರು ತಕ್ಷಣವೇ ಅವನ್ನು ಖಾಲಿ ಮಾಡಬೇಕು” ಎಂದು ಮನವಿ ಮಾಡಿದ್ದಾರೆ.

https://twitter.com/ANI/status/2083032604035674585/video/1

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular