HomeEntertainmentಐಶ್ವರ್ಯಾ ರೈ ಹುಟ್ಟುಹಬ್ಬದ ಬಳಿಕ ‌ʼಬಿಗ್‌ ಬಿʼ ಹಳೆ ಟ್ವೀಟ್‌ ವೈರಲ್

ಐಶ್ವರ್ಯಾ ರೈ ಹುಟ್ಟುಹಬ್ಬದ ಬಳಿಕ ‌ʼಬಿಗ್‌ ಬಿʼ ಹಳೆ ಟ್ವೀಟ್‌ ವೈರಲ್

ನವೆಂಬರ್ 1 ಐಶ್ವರ್ಯಾ ರೈ ಅವರ ಜನ್ಮದಿನವಾಗಿದ್ದು, ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್ ಅಥವಾ ಶ್ವೇತಾ ಬಚ್ಚನ್ ಐಶ್ವರ್ಯಾ ಅವರಿಗೆ ಶುಭ ಕೋರಿ ಸೋಷಿಯಲ್‌ ಮೀಡಿಯಾದಲ್ಲಿ ಯಾವುದೇ ಪೋಸ್ಟ್‌ ಹಾಕಿರಲಿಲ್ಲ. ಅಭಿಷೇಕ್‌ ಮತ್ತು ಐಶ್ವರ್ಯಾ ರೈ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ವದಂತಿಗಳ ಮಧ್ಯೆ ಈ ವಿಷಯ ಈಗ ಚರ್ಚೆಗೆ ಕಾರಣವಾಗಿದೆ.

ಈ ಎಲ್ಲ ವಿದ್ಯಾಮಾನ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ನಡುವಿನ ಸಂಭವನೀಯ ವಿಚ್ಛೇದನದ ವದಂತಿಗಳನ್ನು ಮತ್ತಷ್ಟು ಹೆಚ್ಚಿಸಿದೆ.

ಇದರ ಮಧ್ಯೆ ಒಬ್ಬ ಇಂಟರ್ನೆಟ್ ಬಳಕೆದಾರರು ಅಮಿತಾಬ್ ಬಚ್ಚನ್ ಅವರ ಹಳೆಯ ಟ್ವೀಟ್‌ಗಳನ್ನು ಹೈಲೈಟ್ ಮಾಡಿದ್ದಾರೆ, 2010 ರಲ್ಲಿ, ಐಶ್ವರ್ಯಾ ರೈ ಅವರ ಮಾವ, ಅಮಿತಾಭ್ ಬಚ್ಚನ್, ಸೊಸೆ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದರು, ಮಾತ್ರವಲ್ಲದೆ ಕುಟುಂಬ ಅಂದು ಹುಟ್ಟುಹಬ್ಬವನ್ನು ಹೇಗೆ ಆಚರಿಸಿತು ಎಂಬುದರ ಝಲಕ್ ಗಳನ್ನು ಹಂಚಿಕೊಂಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟ್ವೀಟ್‌ನಲ್ಲಿ, “T172 – ಐಶ್ವರ್ಯಾ ಅವರ ಜನ್ಮದಿನದಂದು ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು !! ಎಂದಿದ್ದರಲ್ಲದೇ  “ಫ್ಯಾಮಿಲಿ ಡಿನ್ನರ್ ಅಟ್ ಚೈನೀಸ್ ಇನ್ ತಾಜ್” ಎಂದು ಬರೆದುಕೊಂಡಿದ್ದರು.

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಮದುವೆಯಾಗಿ 17 ವರ್ಷಗಳು ಕಳೆದಿವೆ. ಅನಂತ್ ಅಂಬಾನಿ ಮದುವೆಗೆ ಇವರಿಬ್ಬರು ಪ್ರತ್ಯೇಕವಾಗಿ ಆಗಮಿಸಿದಾಗ ವಿಚ್ಛೇದನದ ವದಂತಿಗಳು ಹರಿದಾಡಲು ಪ್ರಾರಂಭಿಸಿದವು. ಅಷ್ಟೇ ಅಲ್ಲ, ಅವರಿಬ್ಬರ ಸಂಬಂಧವನ್ನು ಪ್ರಶ್ನಿಸುವಂಥ ಒಂದೆರಡು ನಿದರ್ಶನಗಳು ಇತ್ತೀಚೆಗೆ ನಡೆದಿವೆ.

ಐಶ್ವರ್ಯಾ ಮತ್ತು ಅಭಿಷೇಕ್ ಅವರಿಗೆ ನವೆಂಬರ್ 2011 ರಲ್ಲಿ ಜನಿಸಿದ ಆರಾಧ್ಯ ಬಚ್ಚನ್ ಎಂಬ ಮಗಳಿದ್ದಾಳೆ. ಜೂನಿಯರ್ ಬಚ್ಚನ್ ತಮ್ಮ ಇತ್ತೀಚಿನ ಸಂದರ್ಶನದಲ್ಲಿ ಐಶ್ವರ್ಯಾ ಮತ್ತು ತಮ್ಮ ನಡುವೆ ಉಂಟಾಗಿರುವ ಬಿರುಕಿನ ಕುರಿತು ಪರೋಕ್ಷವಾಗಿ ಹೇಳಿಕೊಂಡಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular