ತೂಕ ಕಳೆದುಕೊಳ್ಳ ಬಯಸುವವರು ಈ ಬಗ್ಗೆ ಗಮನ ನೀಡಿ

ತೂಕ ಕಡಿಮೆ ಮಾಡಲು ನಿಮ್ಮ ಆಹಾರ ಪದ್ಧತಿಗಳನ್ನು ಬದಲಾಯಿಸಬೇಕಾಗುತ್ತದೆ. ನಾವು ಪ್ರತಿನಿತ್ಯ ಸೇವಿಸುವ ಕೆಲವು ಆಹಾರಗಳು ತೂಕವನ್ನು ಹೆಚ್ಚಿಸಲು ಸಹಕಾರಿಯಾಗಿವೆ. ಹಾಗಾಗಿ ಆ ಆಹಾರಗಳು ಯಾವುದೆಂದು ತಿಳಿದು ಅದನ್ನು ತಪ್ಪಿಸಿ.

-ಬೆಣ್ಣೆಯಲ್ಲಿ ಕೊಬ್ಬು ಹೆಚ್ಚಾಗಿರುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗಿದೆ. ಹಾಗಾಗಿ ಅದನ್ನು ತಪ್ಪಿಸಿ.

-ಹುರಿದ ಆಹಾರ ಪದಾರ್ಥಗಳಲ್ಲಿ ಕ್ಯಾಲೋರಿ ಅಧಿಕವಾಗಿರುತ್ತದೆ. ಹಾಗಾಗಿ ಈ ಆಹಾರಗಳನ್ನು ಸೇವಿಸಬೇಡಿ.

-ಐಸ್ ಕ್ರೀಂನಲ್ಲಿ ಕೊಬ್ಬು, ಸಕ್ಕರೆ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಇದು ತೂಕವನ್ನು ಹೆಚ್ಚಿಸುತ್ತದೆ. ಹಾಗಾಗಿ ಇದನ್ನು ಸೇವಿಸಬೇಡಿ.

-ಪಿಜ್ಜಾ, ಸೋಯಾ ಚಾಪ್ ನಂತಹ ಜಂಕ್ ಫುಡ್ ನ್ನು ಸೇವಿಸಬೇಡಿ. ಇದರಲ್ಲಿ ಕೊಬ್ಬು ಮತ್ತು ಕ್ಯಾಲೋರಿ ಹೆಚ್ಚಾಗಿರುವುದರಿಂದ ಇದು ತೂಕವನ್ನು ಹೆಚ್ಚಿಸುತ್ತದೆ.

-ಒಣ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದರಲ್ಲಿ ಕೊಬ್ಬು ಮತ್ತು ಕ್ಯಾಲೋರಿ ಹೆಚ್ಚಾಗಿರುತ್ತದೆ. ಇದನ್ನು ತಿಂದರೆ ತೂಕ ಇಳಿಸಿಕೊಳ್ಳಲು ಕಷ್ಟವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read